Advertisement

ಏನು ತಪ್ಪು ಮಾಡದಿದ್ದರೂ ಶಿಕ್ಷೆ: ಜಿಟಿಡಿ ಮುಂದೆ ರೇವಣ್ಣ ಕಣ್ಣೀರು

11:57 PM May 13, 2024 | Team Udayavani |

ಬೆಂಗಳೂರು: ಮಹಿಳೆ ಅಪಹರಣ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರ ಎದುರು ಕಣ್ಣೀರಿಟ್ಟಿದ್ದಾರೆ.

Advertisement

ಸೋಮವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರೇವಣ್ಣ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಇದನ್ನು ಖುದ್ದು ಜಿ.ಟಿ.ದೇವೇಗೌಡರೇ ತಿಳಿಸಿದರು.

ರೇವಣ್ಣರನ್ನು ಭೇಟಿಯಾಗಿ ಆರೋಗ್ಯ ಕುಶಲೋಪರಿ ವಿಚಾರಿಸಬೇಕು, ಮಾತನಾಡಿಸಬೇಕು ಎಂದು ಮನಸ್ಸಿನಲ್ಲಿತ್ತು. ಸೋಮವಾರ ಅನುಮತಿ ಸಿಕ್ಕಿದ್ದರಿಂದ ಭೇಟಿ ಮಾಡಿದ್ದೇನೆ. ಅವರದ್ದು ಈಗ ಪ್ರಶ್ನೆ – ನಾನು ಏನು ತಪ್ಪು ಮಾಡಿದ್ದೇನೆ? ಆಯಮ್ಮನ ಜತೆ ಮಾತನಾಡದೆ 6 ವರ್ಷಗಳಾದವು. ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನನ್ನನ್ನು ಇದರಲ್ಲಿ ಸಿಲುಕಿಸಿ ಹೀಗೆ ಮಾಡಿದ್ದಾರೆ. ಏನೂ ತಪ್ಪು ಮಾಡದೆ ಈ ಶಿಕ್ಷೆ ಕೊಟ್ಟುಬಿಟ್ಟರಲ್ಲ ಎಂದು ಕೊರಗಿದರು. ಇದನ್ನೇ ನೆನಪಿಸಿಕೊಂಡು ಮನಸ್ಸಿಗೆ ದುಃಖವಾಗುತ್ತದೆ ಎಂದು ಕಣ್ಣೀರಿಟ್ಟರು ಎಂದು ವಿವರಿಸಿದರು.

ಅಭಿವೃದ್ಧಿ ಕಾಮಗಾರಿ ಬಗ್ಗೆಯೇ ಚಿಂತೆ
ನಾನು ಒಳ ಹೋದಾಗ ರೇವಣ್ಣ ಅವರು ಆರಾಮವಾಗಿ ಕುಳಿತಿದ್ದರು. ಇಬ್ಬರೂ ಚಹಾ ಕುಡಿದೆವು. ಹಳೆಯ ವಿಷಯಗಳನ್ನೆಲ್ಲ ಮಾತನಾಡಿದರು. ಅವರಿಗೆ ಇಂದಿಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚಿಂತೆ. ರಾಜಕೀಯ ವಿಚಾರಗಳೂ ಚರ್ಚೆಗೆ ಬಂತು. ನಾವು ಎಲ್ಲೆಲ್ಲಿ ಎಡವಿದ್ದೇವೆ? ಸರಕಾರ ಇದ್ದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರಿಗೆ ಏನೂ ಮಾಡಲಿಲಾಗಲಿಲ್ಲ. ಅಧಿಕಾರ ಇದ್ದಾಗ ಮಂತ್ರಿ ಮಾಡಿದವರೆಲ್ಲ ಪಕ್ಷ ಬಿಟ್ಟು ಹೋದರು. ನೀವು ಸಹಿತ ಹಲವರು ದೇವೇಗೌಡರಿಗಾಗಿ ಉಳಿದುಕೊಂಡು ಒಳ್ಳೆಯ ಕೆಲಸ ಮಾಡಿದಿರಿ ಎಂದು ಹೇಳಿದರು ವಿವರಿಸಿದರು.ಕೆ.ಆರ್‌.ಪೇಟೆ ಶಾಸಕ ಎಚ್‌.ಟಿ.ಮಂಜುನಾಥ್‌ ಹಾಗೂ ಶಾಸಕ ಮಂಜು ಅವರು ಕೂಡ ರೇವಣ್ಣ ಭೇಟಿಗಾಗಿ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next