Advertisement

2 ವರ್ಷದ ಪುನೀತ್‌ಗೆ ಮದ್ರಾಸ್‌ನಲ್ಲಿ ಲಿಂಗದೀಕ್ಷೆ!

12:56 AM Oct 30, 2021 | Shreeram Nayak |

ಸಿಂದಗಿ: ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ ಕುಟುಂ ಬಕ್ಕೂ ವಿಜಯಪುರ ಜಿಲ್ಲೆಯ ಸಿಂದಗಿಗೂ ಎಲ್ಲಿಲ್ಲದ ನಂಟು.
ಗದುಗಿನ ಲಿಂ|ಪುಟ್ಟರಾಜ ಗವಾಯಿಗಳು ಸಂಗೀತ ಸಮಾ ರಂಭಕ್ಕಾಗಿ 1977ರಲ್ಲಿ ಮದ್ರಾಸ್‌ಗೆ ತೆರಳಿದ್ದ ಸಂದರ್ಭ ಅವರ ಜತೆ ಸಿಂದಗಿ ಪಟ್ಟಣದ ಊರನ ಹಿರಿಯ ಮಠದ (ಹಾವೇ ರಿಯ ಸಿಂದಗಿ ಮಠ) ಪೀಠಾಧಿಪತಿಗಳಾಗಿದ್ದ ಲಿಂ|ಶಾಂತವೀರ ಪಟ್ಟಾಧ್ಯಕ್ಷರು ಇದ್ದರು. ಪುಟ್ಟರಾಜ ಗವಾಯಿಗಳ ಶಿಷ್ಯರಾದ ವೀರೇಶ ಮದರಿ ಎನ್ನುವವರು ಕನ್ನಡ ಚಿತ್ರರಂಗದ ಗೀತೆಗಳಿಗಾಗಿ ವಯಲಿನ್‌ ನುಡಿಸುತ್ತಿದ್ದರು.

Advertisement

ಅವರು ಮೇರುನಟ ಡಾ|ರಾಜಕುಮಾರ ಅವರಿಗೆ ನಿಮ್ಮ ಮನೆಗೆ ಪುಟ್ಟರಾಜ ಗವಾಯಿಗಳನ್ನು ಊಟಕ್ಕೆ ಕರೆದುಕೊಂಡು ಬರುತ್ತಿರುವೆ ಎಂದು ವಿನಂತಿಸಿಕೊಂಡಿದ್ದರು. ಆಗ ಡಾ|ರಾಜ್‌ ಅವರು ನಿಸ್ಸಂಕೋಚವಾಗಿ ಕರೆದುಕೊಂಡು ಬನ್ನಿ ಎಂದಿದ್ದರು.

ಇದನ್ನೂ ಓದಿ:ಚುನಾವಣಾ ಆಯೋಗದ “ಐಕಾನ್‌’ ಆಗಿದ್ದ ಪುನೀತ್‌

ಆದರೆ, ಪುಟ್ಟರಾಜ ಗವಾಯಿಗಳು ಲಿಂಗದೀಕ್ಷೆ ತೆಗೆದುಕೊಳ್ಳ ದವರ ಮನೆಯಲ್ಲಿ ಉಪಾಹಾರ-ಊಟ ಸೇವನೆ ಇಲ್ಲ ಎಂಬ ಪದ್ಧತಿ ಅನುಸರಿಸುತ್ತಿದ್ದರು. ಈ ಸಂಗತಿ ಗೊತ್ತಾದ ಬಳಿಕ ಅವರ ಜೊತೆಯಲ್ಲಿಯೇ ಇದ್ದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಡಾ|ರಾಜಕುಮಾರ ಕುಟುಂಬಕ್ಕೆ ಲಿಂಗದೀಕ್ಷೆ ನೀಡಿದ್ದರು. ಬಳಿಕ ಡಾ|ರಾಜ್‌ಕುಮಾರ ಮನೆಯಲ್ಲಿ ಪುಟ್ಟರಾಜ ಗವಾಯಿಗಳು, ಶಾಂತವೀರ ಪಟ್ಟಾಧ್ಯಕ್ಷರು ಅವರ ಶಿಷ್ಯ ಬಳಗ ಊಟ ಸೇವಿಸಿ ದ್ದರು. ಆಗ ಪುನೀತ್‌ ಎರಡು ವರ್ಷದವರಾಗಿದ್ದರು ಎನ್ನುವು ದನ್ನು ಸ್ಥಳೀಯ ಊರನ ಮಠದ ಪೀಠಾಧಿ ಪತಿಗಳಾದ ಶಿವಾ ನಂದ ಶಿವಾಚಾರ್ಯರು ತಿಳಿಸಿದ್ದಾರೆ. ಇದಾದ ಬಳಿಕ ಗಜಲ್‌ ಗಾಯಕ ದಿ| ರವೀಂದ್ರ ಹಂದಿಗನೂರ ಅವರು ಶಾಂತವೀರ ಪಟ್ಟಾಧ್ಯಕ್ಷರು ಅವರ ಹೆಸರಿನ ಮೇಲೆ ಹಾಡುಗಳನ್ನು ಹಾಡು ವಂತೆ ಡಾ| ರಾಜಕುಮಾರಗೆ ತಿಳಿಸಿದಾಗ ಅವರು ಎರಡು ಗೀತೆಗಳನ್ನು ಹಾಡಿದ್ದರು. ಹೀಗಾಗಿ ಪುನೀತ್‌ ರಾಜಕುಮಾರ ಕುಟುಂಬಕ್ಕೂ ಸಿಂದಗಿಗೂ ಎಲ್ಲಿಲ್ಲದ ನಂಟು.

Advertisement

Udayavani is now on Telegram. Click here to join our channel and stay updated with the latest news.

Next