ಬೆಂಗಳೂರು: ಪುನೀತ್ ಬದುಕಿನ ಚಿತ್ರಣವನ್ನು ಪಠ್ಯದಲ್ಲಿ ಅಳವಡಿಕೆ ಮಾಡುವಂತೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್.ಆರ್.ರಮೇಶ್ ಸರ್ಕಾರಕ್ಕೆ ಮನವಿ
ಮಾಡಿದ್ದಾರೆ.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಪತ್ರ ಬರೆದಿರುವ ಅವರು, ಕಿರಿಯ ವಯಸ್ಸಿನಲ್ಲೆ ಅಪಾರ ಸಾಧನೆಗೈದಿರು ಅವರ ಬದುಕಿನ ಚಿತ್ರಣವನ್ನು ಪ್ರಾಥಮಿಕ ಶಾಲಾ ಪಠ್ಯದಲ್ಲಿ ಅಳವಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
ಸಮಾಜದ ವಿವಿಧ ಸ್ತರಗಳ ಜತೆಗೆ ಅವರ ಮಾಡಿರುವ ಸೇವೆ ಪರಿಗಣಿಸಿಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ಜಾಹೀರಾತುಗಳಲ್ಲಿ ಉಚಿತವಾಗಿ ನಟಿಸುವ ಮೂಲಕ ಸರ್ಕಾರ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಬದುಕನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಸರ್ಕಾರ ಪಠ್ಯಗಳಲ್ಲಿ ಅವರ ಜೀವನವನ್ನು ಅಳವಡಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ದಿವಾಳಿ ಅಂಚಿನಲ್ಲಿ ಪಾಕ್; ಇಮ್ರಾನ್ ಸರ್ಕಾರ ಪತನ? ಬಂಡಾಯ ಎದ್ದ ಆಡಳಿತದ ಪಕ್ಷದ ಸಂಸದರು