ಸಿಂಪಲ್ ಸುನಿ ನಿರ್ದೇಶನದ “ಆಪರೇಶನ್ ಅಲಮೇಲಮ್ಮ’ ಸಿನಿಮಾದಲ್ಲಿ ನಾಯಕರಾಗಿರುವ ಮನೀಶ್, ಹೇಮಂತ್ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆನ್ನಲಾಗಿದೆ. ಅಲ್ಲಿಗೆ ಮನೀಶ್‌ಗೆ ಕನ್ನಡದಲ್ಲಿ ಮತ್ತೂಮ್ಮೆ ಒಳ್ಳೆಯ ಲಾಂಚ್ ಸಿಕ್ಕಂತಾಗಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಉಳಿದಂತೆ ಚಿತ್ರದ ಇತರ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಕೂಡಾ ನಡೆಯುತ್ತಿದೆ. ಮೂಲಗಳ ಪ್ರಕಾರ, ಬಹುತೇಕ “ಗೋಧಿ ಬಣ್ಣದ’ ತಾಂತ್ರಿಕ ವರ್ಗ ಇಲ್ಲೂ ಮುಂದುವರಿಯಲಿದೆಯಂತೆ.
ಪುನೀತ್ ರಾಜಕುಮಾರ್ ಈಗ ನಿರ್ಮಾಪಕರಾಗುತ್ತಿದ್ದಾರೆ. ಅದು ತಮ್ಮದೇ ಬ್ಯಾನರ್‌ನಲ್ಲಿ ಎಂಬುದು ವಿಶೇಷ! ಹೌದು, ಪುನೀತ್‌ರಾಜಕುಮಾರ್ ಈಗ “ಪಿಆರ್‌ಕೆ’ ಎಂಬ ಬ್ಯಾನರ್ ಹುಟ್ಟುಹಾಕಿದ್ದು, ಈ ಬ್ಯಾನರ್‌ನಡಿ ಸಿನಿಮಾ ಮಾಡಲು ಮುಂದಾಗಿದ್ದಾರೆನ್ನಲಾಗಿದೆ. ಈಗಾಗಲೇ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರದ ಪೂರ್ವತಯಾರಿ ಕೂಡಾ ಜೋರಾಗಿ ನಡೆದಿದೆ.
ಪುನೀತ್ ತಮ್ಮ ಹೊಸ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆನ್ನಲಾಗಿದೆ. ಅವರ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರವನ್ನು ನಿರ್ದೇಶಿಸುವ ಅವಕಾಶ ಹೇಮಂತ್‌ಗೆ ಸಿಕ್ಕಿದೆ ಎಂಬ ಮಾಹಿತಿ ಇದೆ. ಯಾವ ಹೇಮಂತ್ ಎಂದರೆ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದ ನಿರ್ದೇಶಕರು. ಕಳೆದ ವರ್ಷ ಬಿಡುಗಡೆಯಾದ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು.
ಈಗ ಹೇಮಂತ್ ಎರಡನೇ ಸಿನಿಮಾಕ್ಕೆ ಅಣಿಯಾಗಿದ್ದಾರೆ. ಎರಡನೇ ಸಿನಿಮಾಕ್ಕೆ ಅವರಿಗೆ ಪುನೀತ್ ರಾಜಕುಮಾರ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ ಎಂಬುದು ಗಾಂಧಿನಗರದ ಮೂಲಗಳ ಮಾಹಿತಿ. ಹೇಮಂತ್ ಕಥೆ ಇಷ್ಟಪಟ್ಟ ಪುನೀತ್ ಈಗ ಅದನ್ನು “ಪಿಆರ್‌ಕೆ’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆನ್ನಲಾಗಿದೆ.
ಪುನೀತ್ ನಿರ್ಮಾಣದ, ಹೇಮಂತ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕರಾಗಿ ನಟಿಸುವ ಅವಕಾಶ ಯಾರಿಗೆ ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರ ಮನೀಶ್. ಯಾವ ಮನೀಶ್ ಎಂದರೆ “ಆಪರೇಶನ್ ಅಲಮೇಲಮ್ಮ’ ಸಿನಿಮಾ ತೋರಿಸಬೇಕು. ಸಿಂಪಲ್ ಸುನಿ ನಿರ್ದೇಶನದ “ಆಪರೇಶನ್ ಅಲಮೇಲಮ್ಮ’ ಸಿನಿಮಾದಲ್ಲಿ ನಾಯಕರಾಗಿರುವ ಮನೀಶ್, ಹೇಮಂತ್ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆನ್ನಲಾಗಿದೆ.
ಅಲ್ಲಿಗೆ ಮನೀಶ್‌ಗೆ ಕನ್ನಡದಲ್ಲಿ ಮತ್ತೂಮ್ಮೆ ಒಳ್ಳೆಯ ಲಾಂಚ್ ಸಿಕ್ಕಂತಾಗಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಉಳಿದಂತೆ ಚಿತ್ರದ ಇತರ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಕೂಡಾ ನಡೆಯುತ್ತಿದೆ. ಮೂಲಗಳ ಪ್ರಕಾರ, ಬಹುತೇಕ “ಗೋಧಿ ಬಣ್ಣದ’ ತಾಂತ್ರಿಕ ವರ್ಗ ಇಲ್ಲೂ ಮುಂದುವರಿಯಲಿದೆಯಂತೆ. ಚಿತ್ರ ಮಾರ್ಚ್ ನಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಪುನೀತ್‌ರಾಜಕುಮಾರ್ ಅವರ “ರಾಜಕುಮಾರ’ ಚಿತ್ರದ ಚಿತ್ರೀಕಣ ಬಹುತೇಕ ಮುಗಿದಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ. ಮೊನ್ನೆಯಷ್ಟೇ ಅವರ ಹೊಸ ಚಿತ್ರ “ಅಂಜನಿ ಪುತ್ರ’ ಸೆಟ್ಟೇರಿದೆ. ಈ ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದು, ಎನ್.ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.