Advertisement
ಮುಖ್ಯ ಅತಿಥಿಗಳಾಗಿ ಶಿವಲಿಂಗ ಢವಳೇಶ್ವರ ಹಾಗೂ ಚಂದ್ರಶೇಖರ ಗಾಣೆಗೇರ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಆರೋಗ್ಯ ತಜ್ಞರಾದ ಡಾ| ಸಚಿನ್ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಶಿವಲಿಂಗ ಧವಳೇಶ್ವರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮವರು ಸಂಘದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರ ಶಿಕ್ಷಣ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು. ಅನೇಕ ಮಕ್ಕಳು ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದರು.
ಪುಣೆ: ಪುಣೆ ನಮ್ಮವರು ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮವರ ಹಬ್ಬ – ಮಹಿಳೆಯರ ಹಬ್ಬವನ್ನು ಭೋಸರಿ ನಗರದಲ್ಲಿ ಮಾ. 8 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
Related Articles
Advertisement
ಅಕ್ಕಮಹಾದೇವಿ ಮಹಿಳಾ ಮಂಡಲ ಸಾಂಘವಿ ತಂಡ ಪ್ರಸ್ತುತಪಡಿಸಿದ ನೃತ್ಯ ಕಾರ್ಯಕ್ರಮ ಪ್ರಮುಖ ಆಕರ್ಷಣೆ ಯಾಗಿತ್ತು. ಕಾರ್ಯಕ್ರಮದಲ್ಲಿ ನಮ್ಮವರು ಸಂಘದ ಸಂಸ್ಥಾಪಕ ರಾದ ಬಸವರಾಜ ಹಿರೇಮಠ, ಕಾರ್ಯದರ್ಶಿಗಳಾದ ಬಸವರಾಜ ಪಟ್ಟಣ ಶೆಟ್ಟಿ, ಮುರಗೇಶ ಗಿರಿಸಾಗರ, ಅನಿಲ ದೇವ ಸಮುದ್ರ, ಅವಿನಾಶ್ ಹೊಸಮನಿ, ನೀಲಾ, ನೀಲಾಂಬಿಕಾ, ಆಶಾ ಹಿರೇಮಠ, ಸುಜಾತಾ ಇಟಗಿ, ರೂಪಾ ಪಾಟೀಲ…, ನೀಲಿಮಾ ಮೇಟಿ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು