Advertisement

ಪುಣೆ ಶ್ರೀ ಅಯ್ಯಪ್ಪಯಕ್ಷಗಾನ ಮಂಡಳಿ: ತರಬೇತಿ ಶಿಬಿರದ ಉದ್ಘಾಟನೆ

02:51 PM Sep 20, 2017 | |

ಪುಣೆ: ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಇದರ ವತಿಯಿಂದ ಯಕ್ಷಗಾನದ ತರಬೇತಿ ಕೇಂದ್ರವನ್ನು ಪುಣೆ ಕನ್ನಡ ಸಂಘದ ಆಶ್ರಯದಲ್ಲಿ ಕನ್ನಡ ಸಂಘದ ಡಾ|  ಶಾಮರಾವ್‌ ಕಲ್ಮಾಡಿ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಸೆ. 17ರಂದು ಉದ್ಘಾಟಿಸಲಾಯಿತು.

Advertisement

ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌ ಅವರು ದೀಪ ಪ್ರಜ್ವಲಿಸಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ  ಮಾತನಾಡಿ, ಪುಣೆಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಅಯ್ಯಪ್ಪ ಯಕ್ಷಗಾನ ಮಂಡಳಿಯ ಕಾರ್ಯವೈಖರಿಯನ್ನು ಕಂಡಾಗ, ಸಂಘದ ಉತ್ಸಾಹಿ ಪದಾಧಿಕಾರಿಗಳ ಅಪರಿಮಿತ ಉತ್ಸಾಹವನ್ನು ಕಂಡಾಗ ಪುಣೆಯಲ್ಲಿ ಯಕ್ಷಗಾನದ ಕಲೆ ಭದ್ರವಾಗಿ ನೆಲೆನಿಂತು, ಉತ್ತಮ ಬೆಳವಣಿಗೆಯೊಂದಿಗೆ ಬಹುಕಾಲ  ಬಾಳುವಂತಹ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ. ಯಕ್ಷಗಾನವನ್ನು ಕೇವಲ ನೋಡಿ ಆನಂದಿಸುವ ಕಾರ್ಯದಿಂದ ಕಲೆಯ ಬೆಳವಣಿಗೆ ಸಾಧ್ಯವಿಲ್ಲ. ಕಲೆಯ ಬಗ್ಗೆ  ಆಸಕ್ತಿ ಹುಟ್ಟಿಸುವ ಕಾರ್ಯ ಆಗಬೇಕಾಗಿದೆ. ಇಲ್ಲಿ ಕಲಿಕಾ ಸಕ್ತರಿಗೆ ತರಬೇತಿ ನೀಡಿ ಪರಿಪೂರ್ಣ ಯಕ್ಷತಂಡವನ್ನು ತಯಾರುಗೊಳಿಸುವ ಜವಾ ಬ್ದಾರಿಯೊಂದಿಗೆ ಮುನ್ನಡೆದರೆ ಯಕ್ಷಗಾನ ಕಲೆಯನ್ನು ಉಳಿಸಲು ಸಾಧ್ಯವಿದೆ. ಕೇವಲ ನಾಟ್ಯ ತರಬೇತಿಗೆ ಮಾತ್ರ ಸೀಮಿತಗೊಳಿಸದೆ ಹಿಮ್ಮೇಳದ ಭಾಗವತರನ್ನು, ಚೆಂಡೆ, ಮದ್ದಳೆ ವಾದಕರನ್ನೂ ತರಬೇತಿ ನೀಡಿ ಕಲಾವಿದರನ್ನು ಸಿದ್ಧಗೊಳಿಸಿದರೆ ಪುಣೆಯಲ್ಲಿ ಚಿರಕಾಲ ಯಕ್ಷಗಾನದ ರಿಂಗಣ ಮೊಳಗುತ್ತಿರಬಹುದಾಗಿದೆ. ಪುಣೆಯಲ್ಲಿ  ಯಕ್ಷ ಗಾನದ ಉಳಿವಿಗಾಗಿ ಸದಾ ಶ್ರಮಿಸುತ್ತಾ ಆಸಕ್ತಿ ಯಿರುವ ಕಲಾವಿದರಿಗೆ ಕಲಿಸುವಂತಹ ಕಾಳಜಿ ಯಿಂದ ಮದಂಗಲ್ಲು ಆನಂದ ಭಟ್‌ ಹಾಗೂ ಸಂಘದ ಪದಾಧಿಕಾರಿಗಳು ತೊಡಗಿಸಿಕೊಂಡಿರು ವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ನುಡಿದು ಶುಭ ಹಾರೈಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಅವರು ಮಾತನಾಡಿ, ಪುಣೆಯಲ್ಲಿದ್ದುಕೊಂಡು ತಾನು ಅಪಾರವಾಗಿ ಪ್ರೀತಿಸುವ ಕಲೆಯಾದ ಯಕ್ಷಗಾನವನ್ನು ಉಳಿಸಲು  ಬಹಳಷ್ಟು ಕಷ್ಟಪಟ್ಟು  ಶ್ರಮಿಸಿದ್ದೇನೆ. ಇಂದು ಅದರ ಸಾರ್ಥಕತೆಯ ಅನುಭವವಾಗುತ್ತಿದೆ. ನನ್ನ ಉದ್ದೇಶಕ್ಕೆ ಪುಣೆ ಕನ್ನಡ ಸಂಘದ ಪ್ರೋತ್ಸಾಹವನ್ನು  ಜೀವನಪರ್ಯಂತ ಮರೆಯುವಂತಿಲ್ಲ. ಮುಖ್ಯವಾಗಿ ಇಂದಿರಾ ಸಾಲ್ಯಾನ್‌ ಅವರ ಕನ್ನಡ ಪರ ಪ್ರೀತಿ ಹಾಗೂ ಯಕ್ಷಗಾನದ ಬಗೆಗಿನ ಪ್ರೋತ್ಸಾಹ, ಇಂದು ತರಬೇತಿ ಕೇಂದ್ರವೂ ಆರಂಭಗೊಂಡಿರುವುದು ಪುಣೆಯಲ್ಲಿ ಯಕ್ಷಗಾನಕ್ಕೆ ಪ್ರಾಪ್ತಿಯಾದ  ದೊಡ್ಡ ಗೌರವ ಎನ್ನಬಹುದಾಗಿದೆ ಎಂದರು.

ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಇಂದು ಕನ್ನಡ ಸಂಘದ ಆಶ್ರಯದಲ್ಲಿ ತರಬೇತಿ ಕೇಂದ್ರ ಆರಂಭಗೊಂಡಿರುವುದು ಕಲೆಯನ್ನು ಪ್ರೀತಿಸುವ ಕಲಾಭಿಮಾನಿಗಳಿಗೆ, ಕಲೆಯನ್ನು ಕಲಿಯಲಿಚ್ಛಿಸುವ ಕಲಾವಿದರಿಗೆ ಬಹಳಷ್ಟು   ಸಂತಸ ನೀಡುವ ವಿಚಾರವಾಗಿದೆ.  ಪ್ರಾರಂಭಿಕ ಹಂತದಲ್ಲಿ ಮದಂಗಲ್ಲು ಆನಂದ ಭಟ್‌ ಅವರ ನೇತೃತ್ವದಲ್ಲಿ, ಯುವ ಪ್ರತಿಭಾವಂತ ಕಲಾವಿದ ವಿಕೇಶ್‌ ರೈ ಶೇಣಿ ಹಾಗೂ ಸಹಕಲಾವಿದರ ಸಹಕಾರ ದೊಂದಿಗೆ ನಾಟ್ಯ ತರಬೇತಿಯನ್ನು ನೀಡಲಾಗುವುದು. ಹಂತಹಂತವಾಗಿ ಹಿಮ್ಮೇಳದ ತರಬೇತಿಯನ್ನೂ ನೀಡಿ ಪೂರ್ಣರೂಪದ ಕಲಾವಿದರನ್ನು ತಯಾರುಗೊಳಿಸುವ ಉದ್ದೇಶ ನಮ್ಮದಾಗಿದ್ದು, ಕಲಾಪೋಷಕರ ಪ್ರೋತ್ಸಾಹ ಅಗತ್ಯವಾಗಿದೆ. ಕೇವಲ ತುಳು-ಕನ್ನಡಿಗರಿಗೆ ಮಾತ್ರವಲ್ಲದೆ ಮರಾಠಿ, ಹಿಂದಿ ಭಾಷಿಕರಿಗೂ ತರಬೇತಿ ನೀಡುವ  ಉದ್ದೇಶ ನಮ್ಮದಾಗಿದೆ. ಪ್ರತಿ ರವಿವಾರ ಸಂಜೆ 4ರಿಂದ 6ರವರೆಗೆ ಕನ್ನಡ ಮಾಧ್ಯಮ ಶಾಲೆಯ ತಳಮಹಡಿ ಹಾಲ್‌ನಲ್ಲಿ ಉಚಿತ ತರಬೇತಿ ಶಿಬಿರ ನಡೆಯಲಿದ್ದು ಆಸಕ್ತರು ಸಂಘದ ಪದಾಧಿ ಕಾರಿಗಳನ್ನು ಸಂಪರ್ಕಿಸಬಹುದಾಗಿದೆ.  ತರಬೇತಿ ಕೇಂದ್ರ ಆರಂಭಿಸಲು ಸಹಕಾರ ನೀಡಿ ಕಲಾಸೇವೆಗೆ ಕೊಡುಗೆ ನೀಡುತ್ತಿರುವ ಕನ್ನಡ ಸಂಘಕ್ಕೆ ನಮ್ಮ ಸಂಸ್ಥೆ ಸದಾ ಚಿರಋಣಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್‌  ಹೆಗ್ಡೆ ಮಟ್ಟಾರ್‌, ಕೋಶಾಧಿಕಾರಿ ವಾಸು ಕುಲಾಲ್‌ ವಿಟ್ಲ, ಕಲಾವಿದರಾದ ಸುಕೇಶ್‌  ಶೆಟ್ಟಿ ಎಣ್ಣೆಹೊಳೆ, ವಿಕೇಶ್‌  ರೈ ಶೇಣಿ, ಯಾದವ್‌ ಬಂಗೇರ, ಶ್ರೇಯಸ್‌  ಶೆಟ್ಟಿ, ವಿಕ್ರಂ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಹಿರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು. ಸುಕೇಶ್‌ ಶೆಟ್ಟಿ ಎಣ್ಣೆಹೊಳೆ ಸ್ವಾಗತಿಸಿದರು.  ವಿಕೇಶ್‌  ರೈ ಶೇಣಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next