Advertisement

ಸಲಿಂಗ ಕಾಮಕ್ಕೆ ಒಪ್ಪದ ಸ್ನೇಹಿತನ ಮೇಲೆ ಹಲ್ಲೆ, ಪೊಲೀಸರಿಗೆ ದೂರು

03:05 PM May 10, 2018 | udayavani editorial |

ಪುಣೆ : ಸಲಿಂಗ ಕಾಮಕ್ಕೆ ಒಪ್ಪದ ತನ್ನ ಸ್ನೇಹಿತನ ಮೇಲೆ ಇಲ್ಲಿನ ಕಾಳೇವಾಡಿಯ 40ರ ಹರೆಯದ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯು ಇಲ್ಲಿನ ಹಿಂಜೇವಾಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಈ ಘಟನೆಯು ಕಳೆದ ಸೋಮವಾರ ರಾತ್ರಿ ಕಟರಾಜ-ದೇಹು ರೋಡ್‌ ಬೈಪಾಸ್‌ನ ಸರ್ವಿಸ್‌ ರಸ್ತೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಲಿಂಗ ಕಾಮಕ್ಕೆ ಒಪ್ಪದೆ ಹಲ್ಲೆಗೆ ಗುರಿಯಾದ 29ರ ಹರೆಯದ ವ್ಯಕ್ತಿ ಚಿಂಚವಾಡ ನಿವಾಸಿಯಾಗಿದ್ದು ಆತನ ಕೈಗೆ ಗಾಯವಾಗಿದೆ. ಪೊಲೀಸರು ಹಲ್ಲೆಗೈದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆತನನ್ನು ಶೋಧಿಸುತ್ತಿದ್ದಾರೆ. 

ಹಿಂಜೇವಾಡ ಪೊಲೀಸ್‌ ಠಾಣೆ ಅಧಿಕಾರಿ ಹೇಳಿರುವ ಪ್ರಕಾರ ದೂರುದಾರನು ಕೆಲ ತಿಂಗಳ ಹಿಂದೆ ಜಿಮ್‌ನಲ್ಲಿ ಶಂಕಿತನನ್ನು ಭೇಟಿಯಾಗಿ ಆತನೊಂದಿಗೆ ಸ್ನೇಹ ಹೊಂದಿ ಕೆಲವಾರು ಬಾರಿ ಆತನೊಂದಿಗೆ ಸಲಿಂಗ ಕಾಮ ನಡೆಸಿದ್ದಾನೆ ಎಂದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next