Advertisement

ಪುಣೆ ಕನ್ನಡ ಸಂಘ ನೂಪುರ ನಾದ- ಸಂಗೀತ ನೃತ್ಯ ಮಹೋತ್ಸವ

04:58 PM Jun 13, 2019 | Team Udayavani |

ಪುಣೆ: ಕನ್ನಡ ಸಂಘ ಪುಣೆಯಲ್ಲಿ ಒಂದು ವಿಶೇಷ ಸಂಗೀತ ನೃತ್ಯ ಮಹೋತ್ಸವವನ್ನು ಆಯೋಜಿಸಲಾಯಿತು. ಪುಣೆಯ ಭೈರವಿ ಸಂಗೀತ ಪ್ರಸಾರಕ ಮಂಡಲ ಮತ್ತು ಶಿವಸಾಮ್ರಾಜ್ಯ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ನೂಪುರ್‌ ನಾದ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

Advertisement

ನೃತ್ಯಕಲಾವಿದೆ, ನೃತ್ಯ ಶಿಕ್ಷಕಿ ಪುಣೆಯ ಡಾ| ಸ್ವಾತಿ ದೈತಂಕರ್‌ ಮತ್ತು ಡಾ| ದೈತಂಕರ್‌ ದಂಪತಿ ಪ್ರತಿವರ್ಷ ಪುಣೆಯಲ್ಲಿ ಇಂತಹ ಸಂಗೀತ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಈ ವರ್ಷ ಬೆಂಗಳೂರಿನ ಪ್ರಸಿದ್ಧ ಅಂತಾರಾಷ್ಟ್ರೀಯ ನೃತ್ಯಕಲಾವಿದೆ ಮತ್ತು ಕನ್ನಡ ನಟಿ ರುಕ್ಮಿಣಿ ವಿಜಯ ಕುಮಾರ್‌ ಅವರ ಅಮೋಘ ನೃತ್ಯ ಪ್ರದರ್ಶನ ಮತ್ತು ಪುಣೆಯ ಯುವ ಹಿಂದೂಸ್ತಾನಿ ಗಾಯಕ ಪಂಡಿತ್‌ ಸಂಜೀವ್‌ ಅಭ್ಯಂಕರ್‌ ಅವರ ಗಾಯನ ರಸಿಕರ ಅಪಾರ ಮೆಚ್ಚುಗೆ ಪಡೆದು ನೃತ್ಯ ಸಂಗೀತದ ರಸದೌತಣ ನೀಡಿ ಪ್ರೇಕ್ಷಕರ ಮನ ಸೂರೆಗೊಂಡಿತು.

ಕಾರ್ಯಕ್ರಮದ ಮಧ್ಯಾಂತರದಲ್ಲಿ ಆಯೋಜಕರಿಂದ ಕನ್ನಡ ಸಂಘ ಪುಣೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌ ಮತ್ತು ಜನಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯ ಮತ್ತು ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ಸುಧೀಂದ್ರ ಸರ್ನೋಬತ್‌ ಅವರನ್ನು ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು. ಕನ್ನಡ ಸಂಘ ಪುಣೆಯ ತನ್ನ ಎರಡು ಭವ್ಯ ಸುಸಜ್ಜಿತ ಸಭಾಗೃಹಗಳಲ್ಲಿ ಸ್ಥಳೀಯ ಕನ್ನಡಿಗರ ಹಾಗೂ ಮಹಾರಾಷ್ಟ್ರೀಯರ ರಸಿಕರ ಅಭಿರುಚಿಗೆ ಸ್ಪಂದಿಸುತ್ತಾ ಆಯ್ದ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಶಂಸೆಗೆ ಪಾತ್ರವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next