ಪುಣೆ: ಪುಣೆ ಬಂಟರ ಸಂಘದ ಮುಖವಾಣಿ ತ್ತೈಮಾಸಿಕ ಪತ್ರಿಕೆ ಕಲ್ಪವೃಕ್ಷ ಎ. 14ರಂದು ಚೊಚ್ಚಲ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯೊಂದು ನಗರದ ಕೊರೊನೇಟ್ ಹೊಟೇಲ್‌ಸಭಾಗೃಹ ದಲ್ಲಿ ಮಾ. 25ರಂದು ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ನಮ್ಮ
ಸಂಘದ ಮಹತ್ವದ ಕನಸಾದ ಮಾಧ್ಯಮ ರೂಪವಾಗಿ ಸಂಘದ ಮುಖವಾಣಿ ತ್ತೈಮಾಸಿಕ ಪತ್ರಿಕೆ ಕಲ್ಪವೃಕ್ಷ ಆರಂಭಿಸಲು ಸಮಿತಿ ಸಭೆ ಯಲ್ಲಿ ನಿರ್ಧರಿಸಲಾಗಿದ್ದು, ಇದರ ಕಾರ್ಯಾಧ್ಯಕ್ಷರನ್ನಾಗಿ ಚಂದ್ರಶೇಖರ ಶೆಟ್ಟಿ ನಿಟ್ಟೆ ಯವರನ್ನು ಆಯ್ಕೆಗೊಳಿಸಿದ್ದಲ್ಲದೆ ಹಿರಿಯ ಕವಿ, ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿಯವರನ್ನು ಗೌರವ ಸಂಪಾದಕರಾಗಿ ಹಾಗೂ ಸಂಪಾದಕ ಮಂಡಳಿಯನ್ನು ರಚಿಸಲಾಗಿ ಸಮಿತಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಎ. 14ರಂದು ಮೊದಲ ಸಂಚಿಕೆಯನ್ನು ಗಣ್ಯ ಅತಿಥಿಗಳ ಹಸ್ತದಿಂದ ಬಿಡುಗಡೆ ಗೊಳಿಸಲಾಗುವುದು. ನಮ್ಮ ಪತ್ರಿಕೆ
ಸಂಘದ ವಿಸ್ತೃತ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಹೊಂದುವುದಲ್ಲದೆ ಸಮಾಜದ ವಿವಿಧ ಆಗುಹೋಗುಗಳ ಬಗ್ಗೆ, ಸಮಾಜ ಬಾಂಧವರ ಸಾಧನೆ
ಗಳ ಬಗ್ಗೆ, ಕಲೆ ಕ್ರೀಡೆ, ಶಿಕ್ಷಣ, ಸಮಾಜ ಮುಖೀ ಕಾರ್ಯಗಳ ಮಾಹಿತಿಗಳನ್ನು ನೀಡ
ಲಾಗುವುದು. ಸಂಪಾದಕ ಮಂಡಳಿಯ ಎಲ್ಲ ಸದಸ್ಯರು ಶ್ರಮಿಸಿ ಪತ್ರಿಕೆಯನ್ನು ಒಪ್ಪ ಓರಣವಾಗಿ ರೂಪಿಸುವಲ್ಲಿ ಪ್ರಯತ್ನಿಸಬೇಕಾಗಿದೆ. ಈ ಪತ್ರಿಕೆ ಸಮಾಜ ಬಾಂಧವರೆಲ್ಲರ ಅಚ್ಚುಮೆಚ್ಚಿನ ಮಾಧ್ಯಮವಾಗಿ ಮೂಡಿಬರಲಿ ಎಂಬ ಆಶಯ ನಮ್ಮ ದಾಗಿದ್ದು, ಸದಸ್ಯಬಾಂಧವರೆಲ್ಲರ ಸಹಕಾರ ಬೇಕಾಗಿದೆ. ಮೊದಲ ಸಂಚಿಕೆ
ಯನ್ನು ಸಂಘದ ಎಲ್ಲ ಸದಸ್ಯರಿಗೂ ಉಚಿತವಾಗಿ ನೀಡಲಾಗುವುದು. ಈ ಪತ್ರಿಕೆಗೆ ಸಮಾಜ ಬಾಂಧವರು ಜಾಹೀರಾತು ನೀಡಿಯೂ ಪ್ರೋತ್ಸಾಹಿ ಸುವಂತೆ ಪತ್ರಿಕಾ ಬಳಗ ವಿನಂತಿಸಬೇಕಾಗಿದೆ ಎಂದರು.
ಸಭೆಯಲ್ಲಿ ಕಲ್ಪವೃಕ್ಷ ತ್ತೈಮಾಸಿಕ ಪತ್ರಿಕೆಯ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ಅವರು ಪತ್ರಿಕೆಯ ಬಗ್ಗೆ ವಿವರಗಳನ್ನು ನೀಡುತ್ತಾ, ಪತ್ರಿಕೆಗಾಗಿ ಸೂಕ್ತವಾದ ಸಂಪಾದಕ ಮಂಡಳಿಯನ್ನು ರಚಿಸಿದ್ದಲ್ಲದೆ ಸರ್ವಾಂಗ ಸುಂದರವಾಗಿ ಮೂಡಿ ಬರಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಅದೇ ರೀತಿ ಸಲಹಾ ಮಂಡಳಿಯನ್ನು ರಚಿಸಲಾಗಿದ್ದು ಅವರೊಂದಿಗೆ ಚರ್ಚಿಸಿ ಪತ್ರಿಕೆಯ ರೂಪರೇಷಗಳನ್ನು ಅಂತಿಮ ಗೊಳಿಸಲಾಗಿದೆ ಎಂದು ನುಡಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಸದಸ್ಯರೆಲ್ಲರೂ ಸಹಕಾರ ನೀಡಬೇಕೆಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಜತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸಂಪಾದಕ ಪಾಂಗಾಳ ವಿಶ್ವನಾಥ ಶೆಟ್ಟಿ, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ಪದಾಧಿಕಾರಿಗಳಾದ ಗಣೇಶ್ ಹೆಗ್ಡೆ, ದಿನೇಶ್ ಶೆಟ್ಟಿ ಕಳತ್ತೂರು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಮಹಿಳಾ ವಿಭಾಗದ ಸದಸ್ಯರಾದ ಸುಚಿತ್ರಾ ಶೆಟ್ಟಿ, ದಿವ್ಯಾ ಎಸ್. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ , ಉತ್ತರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್. ಶೆಟ್ಟಿ, ಸಮಿತಿ ಸದಸ್ಯರಾದ ಅರುಣಾ ಆರ್. ಶೆಟ್ಟಿ, ಶಕುಂತಳಾ ವಿ. ಶೆಟ್ಟಿ, ಯುವ ವಿಭಾಗದ ಪ್ರಫುಲ್ ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ -ವರದಿ: ಕಿರಣ್ ಬಿ. ರೈ ಕರ್ನೂರು