Advertisement

Pune: ಸತ್ಕರ್ಮದಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ಪ್ರಭಾಕರ ಶೆಟ್ಟಿ

06:09 PM Apr 13, 2023 | Team Udayavani |

ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ವತಿಯಿಂದ ಹನುಮಾನ್‌ ಜಯಂತ್ಯುತ್ಸವ ಎ. 6 ರಂದು ಸ್ವಾರ್‌ಗೇಟ್‌ನ ಮಹಾರಾಷ್ಟ್ರ ಛೇಂಬರ್‌ ಆಫ್‌ ಕಾಮರ್ಸ್‌ ಇದರ ಲಕಾಕಿ ಹಾಲ್‌ನಲ್ಲಿ ನಡೆಯಿತು.

Advertisement

ಪುಣೆ ಬಳಗದ ಗೌರವಾಧ್ಯಕ್ಷ ಸದಾನಂದ ಕೆ. ಶೆಟ್ಟಿ, ಅಧ್ಯಕ್ಷ ಪ್ರಭಾಕರ ಶೆಟ್ಟಿ ಮತ್ತು ವಿಭಾಗದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ಅವರು ಹನುಮಾನ್‌ ದೇವರಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು, ಬಳಗದ ಸದಸ್ಯರಿಂದ ದಾಮೋದರ ಬಂಗೇರ ಅವರ ಮಾರ್ಗದರ್ಶನದಲ್ಲಿ ಬಳಗದ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮ ನಡೆಯಿತು. ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್‌ ಚಾಲೀಸ್‌ ಅನ್ನು ಪಠಿಸಿದರು. ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಸದಾನಂದ ಕೆ. ಶೆಟ್ಟಿ, ಅಧ್ಯಕ್ಷ ಪ್ರಭಾಕರ ಶೆಟ್ಟಿ, ವೀಣಾ ಪಿ. ಶೆಟ್ಟಿ ದಂಪತಿ, ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗಣೇಶ್‌ ಹೆಗ್ಡೆ, ಬಳಗದ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ಮತ್ತು ಪದಾಧಿಕಾರಿಗಳು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಾಧಿಕಾರಿಗಳು, ಸದಸ್ಯೆಯರು, ಗುರು ಭಕ್ತರು ಆರತಿಗೈದರು. ಬಳಿಕ ಪ್ರಸಾದ ವಿತರಣೆ ಜರಗಿತು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದವರು ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಹನುಮನಿಗೆ ಅರ್ಪಿಸಿ ಪ್ರಸಾದ ರೂಪದಲ್ಲಿ ಹಂಚಿದರು.

ಕಾರ್ಯಕ್ರಮದಲ್ಲಿ ಪುಣೆ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಾತನಾಡಿ, ಸಾಮೂಹಿಕವಾಗಿ ಹನು ಮಾನ್‌ ಚಾಲೀಸ್‌ ಪಠನೆಯಿಂದ ದೈವಿಕ ಸಂಚಲನ ನಮ್ಮಲ್ಲಿ ಮೂಡುತ್ತದೆ. ಹನುಮನ ನಂಬಿ ಮಾಡುವ ಪ್ರತಿಯೊಂದು ಕಾರ್ಯವು ಫಲಪ್ರದ ವಾಗುತ್ತದೆ. ನಮ್ಮ ಜೀವನದಲ್ಲಿ ಸಾರ್ಥ ಕತೆ ಪಡೆಯಬೇಕಾದರೆ ಉತ್ತಮ ಸಂಸ್ಕಾರ, ಸತ್ಯ, ಧರ್ಮ, ಶಾಂತಿ ಸ್ನೇಹ ಮಯ ಜೀವನದ ದಾರಿಯಲ್ಲಿ ನಡೆಯಬೇಕು. ನಮ್ಮ ಸತ್ಕರ್ಮ ಫಲದಿಂದ ಸುಸಂಸ್ಕೃತ ಸಮಾಜ ನಿರ್ಮಾ
ಣವಾಗುವುದು ಎಂದರು.

ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗಣೇಶ್‌ ಹೆಗ್ಡೆ, ಬಳಗದ ಪ್ರಮುಖರಾದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ರಂಜಿತ್‌ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಾಧವ ಶೆಟ್ಟಿ, ಪುರಂದರ ಪೂಜಾರಿ, ಸುಧಾಕರ ಶೆಟ್ಟಿ, ಅಜಿತ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಶಬರಿ, ಜಗದೀಶ್‌ ಹೆಗ್ಡೆ, ದಾಮೋದರ ಬಂಗೇರ, ನಾಗರಾಜ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ಸುಭಾಷ್‌ ಶೆಟ್ಟಿ, ಜಯ ಶೆಟ್ಟಿ, ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು. ಶೆಟ್ಟಿ, ಮಾಜಿ ಅಧ್ಯಕ್ಷೆ ಸುಧಾ ಎನ್‌. ಶೆಟ್ಟಿ, ದೀಪಾ ಎ. ರೈ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಶೋಭಾ ಯು. ಶೆಟ್ಟಿ, ವೀಣಾ ಪಿ. ಶೆಟ್ಟಿ, ಸರೋಜಿನಿ ಡಿ. ಬಂಗೇರ, ಪ್ರೇಮಾ ಎಸ್‌. ಶೆಟ್ಟಿ, ಪುಷ್ಪಾ ಪೂಜಾರಿ, ವೀಣಾ ಡಿ. ಶೆಟ್ಟಿ, ಸರೋಜಿನಿ ಡಿ. ಬಂಗೇರ, ಅಮಿತಾ ಪಿ. ಪೂಜಾರಿ, ಸುಜಾತಾ ಎ. ಶೆಟ್ಟಿ, ಲಲಿತಾ ಪೂಜಾರಿ, ಶ್ವೇತಾ ಎಚ್‌. ಮೂಡಬಿದ್ರೆ, ಮಮತಾ ಡಿ. ಶೆಟ್ಟಿ, ರಜನಿ ಹೆಗ್ಡೆ, ಸ್ವರ್ಣಲತಾ ಜೆ. ಹೆಗ್ಡೆ, ವನಿತಾ ಎಸ್‌. ಕರ್ಕೇರ, ಅರ್ಚನಾ ಶೆಟ್ಟಿ, ಉಮಾ ಶೆಟ್ಟಿ, ಸಂಧ್ಯಾ ಶೆಟ್ಟಿ ಹಾಗೂ ಹೆಚ್ಚಿನ ಗುರು ಭಕ್ತರು ಭಾಗವಹಿಸಿ ಹನುಮ ಕೃಪೆಗೆ ಪಾತ್ರರಾದರು. ಕಾರ್ಯದರ್ಶಿ ರೋಹಿತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

ಬಳಗದ ಮುಖಾಂತರ ಸುಮಾರು 22 ವರ್ಷಗಳಿಂದ ಹನುಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡಿ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು.
-ಗಣೇಶ್‌ ಹೆಗ್ಡೆ ಪುಣ್ಚೂರು, ಅಧ್ಯಕ್ಷರು, ಬಂಟ್ಸ್‌
ಅಸೋಸಿಯೇಶನ್‌ ಪುಣೆ

ಭಕ್ತಿಯಿಂದ ಆಚರಿಸುವ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಮಹತ್ವವಿದೆ. ನಾವಿಂದು ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇವೆ. ಎಲ್ಲರಿಗೂ ಶ್ರೀದೇವರು ಅನುಗ್ರಹಿಸಲಿ.
-ಜಯಲಕ್ಷ್ಮೀ ಪಿ. ಶೆಟ್ಟಿ,
ಅಧ್ಯಕ್ಷೆ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ

ಚಿತ್ರ – ವರದಿ:ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next