Advertisement

ಪಂಪ್‌ವೆಲ್‌- ಪಡೀಲ್‌ ಸ್ಮಾರ್ಟ್‌ ರಸ್ತೆ ನಿರ್ಮಾಣಕ್ಕೆ ಚಾಲನೆ

12:31 AM Feb 14, 2022 | Team Udayavani |

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ 1 ಸಾವಿರ ಕೋ.ರೂ. ಮೊತ್ತದ ಕಾಮಗಾರಿಗಳನ್ನು ಗುರುತಿಸಲಾಗಿದ್ದು, 360 ಕೋಟಿ ರೂ.ಗಳ ಕಾಮಗಾರಿ ಈಗಾಗಲೇ ನಡೆದಿದೆ.

Advertisement

2023- 24ರ ವೇಳೆಗೆ ಎಲ್ಲವೂ ಪೂರ್ಣಗೊಂಡು ಮಂಗಳೂರು ರಾಜ್ಯದ 2ನೇ ಸ್ವಚ್ಛ, ಸುಂದರ ನಗರವಾಗಿ ಮೂಡಿ ಬರಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಅವರು ರವಿವಾರ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ನಗರದ ಪಂಪ್‌ವೆಲ್‌ ನಿಂದ ಪಡೀಲ್‌ ವರೆಗಿನ 2,800 ಮೀ. ಉದ್ದದ, 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬಿ.ಸಿ.ರೋಡ್‌- ಅಡ್ಡಹೊಳೆ ರಾ.ಹೆ. ಕಾಮಗಾರಿ 2023ರ ಡಿಸೆಂಬರ್‌ ಒಳಗೆ ಪೂರ್ಣಗೊಳ್ಳಲಿದೆ. ಕೆಪಿಟಿ, ನಂತೂರು ಜಂಕ್ಷನ್‌ಗಳಲ್ಲಿ ಫ್ಲೈಓವರ್‌ ಆಗಲಿವೆ. ಮಹಾಕಾಳಿಪಡು³ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕ್ರೀಡಾ ಸಂಕೀರ್ಣ, ಅಂತಾರಾಷ್ಟ್ರೀಯ ಈಜು ಕೊಳ, ರಿವರ್‌ ಫ್ರಂಟ್‌ ಇತ್ಯಾದಿ ಕಾರ್ಯಗತಗೊಳ್ಳಲಿವೆ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ 3 ಸಾವಿರ ಕೋ.ರೂ. ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದೆ ಎಂದರು.

Advertisement

ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪಂಪ್‌ವೆಲ್‌- ಪಡೀಲ್‌ ರಸ್ತೆ ಅಭಿವೃದ್ಧಿಗೆ ಈ ಹಿಂದೆ ರಾ.ಹೆ. ಪ್ರಾಧಿಕಾರವು 45 ಮೀ. ಅಗಲ ಬೇಕೆಂದಿತ್ತು. ಈಗ ಈ ರಸ್ತೆ ಮನಪಾ ಸುಪರ್ದಿಗೆ ಬಂದಿದ್ದು, ಅಗಲವನ್ನು 45 ಮೀ.ನಿಂದ 30 ಮೀ.ಗೆ ಇಳಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಇದಾದರೆ ರಸ್ತೆ ಬದಿಯ ಭೂ ಮಾಲಕರಿಗೆ ಅನುಕೂಲವಾಗಲಿದೆ ಎಂದರು.

ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ವಿವಿಧ ನಿಗಮಗಳ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್‌, ನಿತಿನ್‌ ಕುಮಾರ್‌, ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಕಾರ್ಪೊರೇಟರ್‌ಗಳಾದ ಸಂದೀಪ್‌ ಗರೋಡಿ, ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಪ್ರವೀಣ್‌ಚಂದ್ರ ಆಳ್ವ, ಪಾಲಿಕೆಯ ಮುಖ್ಯ ಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು, ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ, ಮಾಜಿ ಕಾರ್ಪೊರೇಟರ್‌ಗಳಾದ ವಿಜಯ ಕುಮಾರ್‌, ಜೇಮ್ಸ್‌ ಡಿ’ಸೋಜಾ, ಆಶಾ ಡಿ’ಸಿಲ್ವ, ಪ್ರಭಾ ಮಾಲಿನಿ, ಭಾಸ್ಕರಚಂದ್ರ ಶೆಟ್ಟಿ ಇದ್ದರು. ಸ್ಮಾರ್ಟ್‌ ಸಿಟಿಯ ಜ. ಮ್ಯಾನೇಜರ್‌ ಅರುಣ್‌ ಪ್ರಭಾ ಸ್ವಾಗತಿಸಿದರು.

ಚತುಷ್ಪಥ ರಸ್ತೆ ಹೀಗಿರಲಿದೆ
ಈ ರಸ್ತೆ ಸ್ಮಾರ್ಟ್‌ ಸಿಟಿ ಅಡಿ 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್‌ ರಸ್ತೆ ಆಗಲಿದೆ. ಇದರಲ್ಲಿ 3.50 ಮೀ. ಅಗಲದ 4 ಲೇನ್‌ ಕಾಂಕ್ರೀಟ್‌ ವೇ, ಇಕ್ಕೆಲದಲ್ಲಿ 3 ಮೀ. ಅಗಲ ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ ಕಾಮಗಾರಿ ಗುತ್ತಿಗೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next