Advertisement
ಪಡೀಲ್‌ನಿಂದ ಕಾಮಗಾರಿ ಆರಂಭವಾಗಿದ್ದು, ಒಂದು ಬದಿಯಲ್ಲಿ ಸುಮಾರು 200 ಮೀ.ನಷ್ಟು ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಕಪಿತಾನಿಯೋ ವರೆಗೆ ಅಲ್ಲಲ್ಲಿ ತಡೆ ಗೋಡೆ ನಿರ್ಮಿಸಿ ಮಣ್ಣ ಹಾಕಿ ಸಮತಟ್ಟುಗೊಳಿಸಲಾಗಿದೆ. ರಸ್ತೆ ಬದಿಯ ಕೆಲವು ಕಟ್ಟಡಗಳನ್ನೂ ತೆರವುಗೊಳಿಸಲಾಗಿದೆ. ಮಳೆ ನೀರು ಹರಿಯುವ ಚರಂಡಿ ನಿರ್ಮಾಣ ಕೆಲಸವೂ ಅಲ್ಲಲ್ಲಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಉದ್ದೇಶ ದಕ್ಕೆ ಸ್ಥಳದಲ್ಲಿದ್ದ ಬೃಹತ್ ಮರ ಗಳನ್ನು ನೆಲಸಮಗೊಳಿಸಲಾಗಿದೆ. ಸಾಧ್ಯವಿರುವ ಮರಗಳನ್ನು ಸ್ಥಳಾಂತರಗೊಳಿಸುವ ಚಿಂತನೆಯಿದೆ. ಕಡಿಯಲಾದ ಮರಗಳ ಬದಲಿಗೆ ಬೇರೆ ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಸ್ಮಾರ್ಟ್ ಸಿಟಿಯಿಂದ ಅರಣ್ಯ ಇಲಾಖೆಗೆ ಮೊತ್ತ ಪಾವತಿ ಸಲಾ ಗಿದೆ ಎನ್ನುತ್ತಾರೆ ಅಧಿಕಾರಿಗಳು.
Related Articles
Advertisement
ಪಡೀಲ್- ಪಂಪ್‌ವೆಲ್ ರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಈ ಹಿಂದೆ ಹೆದ್ದಾರಿಯಾಗಿದ್ದ ಈ ರಸ್ತೆ ಪ್ರಸ್ತುತ ಪಾಲಿಕೆಗೆ ಸೇರಿದ್ದು, ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ನಗರ ಪ್ರವೇಶಿಸಲು ಇರುವ ಪ್ರಮುಖ ರಸ್ತೆ. ಸದ್ಯ ಅಗಲ ಕಿರಿದಾದ ರಸ್ತೆಯಾದ ಕಾರಣ, ಪ್ರತಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಚತುಷ್ಪಥವಾದರೆ ವಾಹನಗಳ ಸುಗಮ ಸಂಚಾರ ಸಾಧ್ಯವಾಗಲಿದೆ. ಜತೆಗೆ ಪಡೀಲ್‌ನಲ್ಲಿ ನಿರ್ಮಾಣ ವಾಗಲಿರುವ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮೊದಲಾದೆಡೆಗಳಿಗೆ ತೆರಳು ವವರಿಗೂ ಅನುಕೂಲವಾಗಲಿದೆ.
ರಸ್ತೆಗೆ ಡಾಮರು
ಪ್ರಸ್ತುತ ವಾಹನಗಳು ಸಂಚರಿಸುತ್ತಿರುವ ಈ ಹಿಂದಿನ ಡಾಮರು ರಸ್ತೆ ಮಳೆ, ಕಾಮಗಾರಿಯ ಕಾರಣ ದಿಂದಾಗಿ ಹದಗೆಟ್ಟಿತ್ತು. ಇದೀಗ ರಸ್ತೆಯನ್ನು ಪ್ಯಾಚ್‌ವರ್ಕ್ ಮೂಲಕ ದುರಸ್ತಿ ಪಡಿಸಲಾಗಿದೆ.ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವ ಕಾಶವಾಗಿದೆ. ಕಾಮಗಾರಿಯ ಕಾರಣದಿಂದಾಗಿ ಧೂಳು ಸಾಮಾನ್ಯವಾಗಿಬಿಟ್ಟಿದೆ.
ಮಾರ್ಚ್ ಅಂತ್ಯದೊಳಗೆ ಪೂರ್ಣ: ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಪೂರಕವಾಗಿ ವಿದ್ಯುತ್ ಕಂಬಗಳ ತೆರವು, ತಡೆಗೋಡೆಗಳ ನಿರ್ಮಾಣ, ನೀರು, ಒಳಚರಂಡಿ ಪೈಪ್‌ಗ್ಳನ್ನು ಸಮರ್ಪಕವಾಗಿ ಅಳವಡಿಸುವ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಪಡೀಲ್ ಭಾಗದಲ್ಲಿ ಒಂದು ಕಡೆ ರಸ್ತೆ ನಿರ್ಮಾಣ ಮಾಡಲಾಗಿದೆ. 2023ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. –ಅರುಣ್ ಪ್ರಭ ಕೆ.ಎಸ್., ಜನರಲ್ ಮ್ಯಾನೇಜರ್-ಟೆಕ್ನಿಕಲ್, ಮಂಗಳೂರು ಸ್ಮಾರ್ಟ್ ಸಿಟಿ ಲಿ.