Advertisement

ಪುಲ್ವಾಮ : ಮೇಜರ್ ಮತ್ತು ನಾಲ್ವರು ಯೋಧರು ಹುತಾತ್ಮ

03:15 AM Feb 18, 2019 | Team Udayavani |

ಶ್ರೀನಗರ: ಇಲ್ಲಿನ ಪುಲ್ವಾಮ ಜಿಲ್ಲೆಯ ಪಿಂಗ್ಲಾನ ಎಂಬಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮೇಜರ್ ಸೇರಿದಂತೆ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಅವಿತಿರುವ ಸುಳಿವನ್ನು ಪಡೆದ ನಮ್ಮ ಯೋಧರು ಸೇನಾ ಕಾರ್ಯಾಚರಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ನಮ್ಮ ಸೈನಿಕರು ಮತ್ತು ಅವಿತಿದ್ದ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸೇನೆಯ ಐವರು ಪ್ರಾಣತ್ಯಾಗ ಮಾಡಿದರು.

Advertisement

ಉಗ್ರರ ಸ್ಥಿತಿಗತಿಯ ಕುರಿತಾಗಿ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದ್ದು, ಈ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next