Advertisement

ಪುಲ್ವಾಮಾ: ಪಾಕ್‌ ಪ್ರಧಾನಿ ಇಮ್ರಾನ್‌ ಮೌನಕ್ಕೆ ಅಮಿತ್‌ ಶಾ ಖಂಡನೆ

06:26 AM Mar 01, 2019 | udayavani editorial |

ಹೊಸದಿಲ್ಲಿ : ಕನಿಷ್ಠ 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಪುಲ್ವಾಮಾ ದಾಳಿಯ ಬಗ್ಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಹಿಸಿರುವ ಜಾಣ ಮೌನವನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಖಂಡಿಸಿದ್ದಾರೆ.

Advertisement

‘ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಈ ವರೆಗೂ ಜೈಶ್‌ ಉಗ್ರ ಸಂಘಟನೆಯ ಪುಲ್ವಾಮಾ ದಾಳಿಯನ್ನು ಖಂಡಿಸಿಯೂ ಇಲ್ಲ, 40 ಯೋಧರು ಆ ದಾಳಿಗೆ ಬಲಿಯಾಗಿರುವುದಕ್ಕೆ ಶೋಕ, ಆಘಾತ, ದುಃಖ ಮುಂತಾಗಿ ಏನನ್ನೂ ವ್ಯಕ್ತಪಡಿಸಿಲ್ಲ; ಅವರ ಈ ನಿಲುವು ಭೀತಿವಾದವನ್ನು ಬೆಂಬಲಿಸುವ ಅವರ ನೀತಿಯನ್ನು ಪ್ರಕಟಿಸುವಂತಿದೆ’ ಎಂದು ಅಮಿತ್‌ ಶಾ ಟೀಕಿಸಿದ್ದಾರೆ. 

ಇಂಡಿಯಾ ಟುಡೇ ಕಾನ್‌ಕ್ಲೇವ್‌ ನಲ್ಲಿ ಮಾತನಾಡಿದ ಅಮಿತ್‌ ಶಾ, ಪಾಕಿಸ್ಥಾನದಲ್ಲಿನ ಉಗ್ರರನ್ನು ಸದೆ ಬಡಿಯುವ ಮೂಲಕ ಪ್ರಧಾನಿ ಮೋದಿ ಸರಕಾರ ಭಯೋತ್ಪಾದನೆಯ ಹಿಂದಿರುವ ಮನಸ್ಸುಗಳಲ್ಲಿ ಭಯವನ್ನು ಸೃಷ್ಟಿಸಿದೆ ಎಂದು ಹೇಳಿದರು. 

ಪಾಕಿಸ್ಥಾನದ ಫ‌ಖ್‌ತೂನ್‌ಖ್ವಾ ಪ್ರಾಂತ್ಯದಲ್ಲಿನ ಬಾಲಾಕೋಟ್‌ ನ ಜೈಶ್‌ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ವೈಮಾನಿಕ ದಾಳಿ ನಡೆಸಿ 350 ಉಗ್ರರನ್ನು ಬಲಿಪಡೆದಿರುವುದನ್ನು ಅಮಿತ್‌ ಶಾ ಸಮರ್ಥಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next