ಜಿಬೂಟಿ: ಕೇರಳದಲ್ಲಿ ಜನಪ್ರಿಯವಾಗಿರುವ ಪುಲಿಕಳಿ (ಹುಲಿ ಕುಣಿತ) ಆಫ್ರಿಕಾ ಖಂಡದ ದೇಶ ಜಿಬೌಟಿಯಲ್ಲಿ ಮೆಚ್ಚುಗೆ ಗಳಿಸಿದೆ.
ಈ ವರ್ಷದ ಓಣಂನಲ್ಲಿ ಹುಲಿ ಕುಣಿತಕ್ಕೆ ಅವಕಾಶ ಸಿಗಲಿಲ್ಲವೆಂದು ಬೇಸರದಲ್ಲಿದ್ದ ತಂಡ ದೂರದ ಜಿಬೂಟಿಯಲ್ಲಿ ಅದಕ್ಕೆ ಅವಕಾಶ ಕಂಡುಕೊಂಡಿದೆ.
ಕೇರಳದ ತ್ರಿಶ್ಶೂರ್‌ನಲ್ಲಿ ಓಣಂನ ನಾಲ್ಕನೇ ದಿನದಂದು ಹುಲಿ ಕುಣಿತ ನಡೆಸಲಾಗುತ್ತದೆ. ಕಲಾವಿದರು ದೇಹದ ಮೇಲೆ ಹುಲಿ ಮತ್ತು ಚಿರತೆ ಚಿತ್ರಗಳನ್ನು ಬಿಡಿಸಿಕೊಂಡು ನೃತ್ಯ ಮಾಡುತ್ತಾ ಮೆರವಣಿಗೆ ಮಾಡುತ್ತಾರೆ. ಅದನ್ನು ನೋಡಲು ನೂರಾರು ಜನರು ಸೇರುತ್ತಾರೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಅದಕ್ಕೆ ಅವಕಾಶವಿರಲಿಲ್ಲ.
ಇದನ್ನೂ ಓದಿ:ಲಾತೂರ್ ಜಿಲ್ಲೆಯ ಹಳ್ಳಿಯಲ್ಲಿ ವೈ ಫೈ; ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲ
ಆ ಬೇಸರದಲ್ಲಿದ್ದ ತಂಡವೊಂದಕ್ಕೆ ಜಿಬೌಟಿಯಲ್ಲಿ ರುವ ಕೇರಳ ಮೂಲದ ಉದ್ಯಮಿ ಅಲ್ಲಿ ನಡೆಯುವ ಇಂಡೋ ಆಫ್ರಿಕನ್ ಫೆಸ್ಟ್‌ನಲ್ಲಿ ಭಾಗವಹಿಸಲು ಆಮಂತ್ರಣ ನೀಡಿದ್ದಾರೆ. ಆರು ಜನರ ತಂಡ ಜಿಬೂಟಿಗೆ ತೆರಳಿದ್ದು, ಅಲ್ಲಿ ಎಂಟು ಸ್ಥಳಗಳಲ್ಲಿ ಚಂಡೆ ವಾದ್ಯದೊಂದಿಗೆ ಹುಲಿ ಕುಣಿತ ಮಾಡಿದೆ. ಅದನ್ನು ನೂರಾರು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಅನೇಕರು ಕಲಾವಿದರ ಹೊಟ್ಟೆ ಮುಟ್ಟಿ ಅದು ನಿಜವಾದ ಚಿತ್ರವೇ ಎಂದು ಪರಿಶೀಲಿಸಿದರು.