ಢಾಕಾ: ಏಕದಿನ ಸರಣಿಯ ಬಳಿಕ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆದರೆ ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ಎದುರಾಗಿದೆ.
ನಾಯಕ ರೋಹಿತ್ ಶರ್ಮಾ ಅವರು ಏಕದಿನ ಸರಣಿಯಲ್ಲಿ ಕೈಬೆರಳಿಗೆ ಪೆಟ್ಟು ಮಾಡಿಕೊಂಡ ಕಾರಣ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರ ಬದಲಿಗೆ ಕೆಎಲ್ ರಾಹುಲ್ ಅವರು ನಾಯಕತ್ವದ ಜವಾಬ್ದಾರಿ ವಹಿಸಲಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಕಳೆದ ಬಾರಿ ಕಳೆದ ಬಾರಿ ರಾಹುಲ್ ಗೆ ಉಪನಾಯಕರಾಗಿದ್ದರು. ಅಲ್ಲದೆ ರೋಹಿತ್, ವಿರಾಟ್, ರಾಹುಲ್ ಅನುಪಸ್ಥಿತಿಯಲ್ಲಿ ಟಿ20 ಸರಣಿಯ ನಾಯಕತ್ವವನ್ನೂ ವಹಿಸಿದ್ದರು. ಆದರೆ ಇದೀಗ ಕಳಪೆ ಫಾರ್ಮ್ ನಲ್ಲಿರುವ ಪಂತ್ ಗೆ ಡಿಮೋಶನ್ ಮಾಡಲಾಗಿದ್ದು, ಕೇವಲ ಆಟಗಾರನಾಗಿ ಮಾತ್ರ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಆರ್‌ಬಿಐ ವಾಟರ್ ಮಾರ್ಕ್,ಗಾಂಧಿ ಚಿತ್ರ.. ನಕಲಿನ ನೋಟಿನ ಜಾಲದ ಹಿಂದೆ ಚೀನದ ಕೈವಾಡ.!
ಅದರ ಬದಲಾಗಿ ಚೇತೇಶ್ವರ ಪೂಜಾರ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ. 96 ಪಂದ್ಯಗಳ ಅನುಭವಿ ಪೂಜಾರ ಈ ಹಿಂದೆ 2020-21ರ ಬಾರ್ಡರ್ – ಗಾವಸ್ಕರ್ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆಗೆ ಡೆಪ್ಯುಟಿಯಾಗಿದ್ದರು.
ಭಾರತ ತಂಡ
ಕೆಎಲ್ ರಾಹುಲ್ (ನಾ), ಶುಭಮನ್ ಗಿಲ್, ಚೇತೇಶ್ವರ ಪೂಜಾರ (ಉ.ನಾ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಭ್ ಕುಮಾರ್, ಜಯದೇವ್ ಉನದ್ಕತ್