ಬಂಟ್ವಾಳ : ಸುಜೀರು ರಸ್ತೆಯನ್ನು ಕಾಂಕ್ರೀಟ್‌ಗೊಳಿಸಿ ಊರಿನ ಜನತೆಗೆ ಶಾಶ್ವತವಾದ ರಸ್ತೆಯನ್ನು ನಿರ್ಮಿಸಿಕೊಡಲಾಗಿದೆ. ಜನತೆಯ ಬಹುದಿನಗಳ ಬೇಡಿಕೆ ಇದಾಗಿದ್ದು ಇಲ್ಲಿನ ವಸತಿ ಪ್ರದೇಶ, ದೈವಸ್ಥಾನ, ಅಂಗನವಾಡಿಗಳಿಗೆ ಸಂಪರ್ಕಿಸುವ ರಸ್ತೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಎರಡನೇ ಹಂತದ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಪುದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 10 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಒಳ ರಸ್ತೆಗಳನ್ನು ಕೂಡ ಅಭಿವೃದ್ಧಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು ಲಭ್ಯವಿರುವ ಅನುದಾನ ಬಳಸಿಕೊಂಡು ಮೊದಲ ಪ್ರಾಶಸ್ತ್ಯದಲ್ಲಿ ರಸ್ತೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.
ಪುದು ಗ್ರಾಮದ ಬಹುತೇಕ ಒಳ ರಸ್ತೆಗಳು ಕಾಂಕ್ರೀಟುಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳು ಕಾಂಕ್ರೀಟುಗೊಳ್ಳಲಿದೆ ಎಂದು ತಿಳಿಸಿದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ಆತೀಕಾ, ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ತಾ.ಪಂ.ಸದಸ್ಯೆ ಪದ್ಮಶ್ರಿ, ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್, ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಉದ್ಯಮಿ ಇಸ್ಮಾಯಿಲ್ ಕೆಇಎಲ್ ವಳಚ್ಚಿಲ್, ಪಂಚಾಯತ್ ಸದಸ್ಯರಾದ ಅಖ್ತರ್ ಹುಸೆ„ನ್, ರಮ್ಲಾನ್, ಇಕ್ಬಾಲ್ ಸುಜೀರ್, ದುಗೇìಶ್ ಶೆಟ್ಟಿ, ಝಾಹೀರ್, ಚಂದಪ್ಪ ಅಂಚನ್, ಕಿಶೋರ್, ರಫೀಕ್ ಪೇರಿಮಾರ್, ಸೌಕತ್, ಆಸೀಫ್ ಮೇಲ್ಮನೆ, ಇಬ್ರಾಹಿಂ ಕುಂಪಣಮಜಲು, ಹುಸೆ„ನ್, ಅಬೂಬಕ್ಕರ್ (ಬಾವಾ), ಸಲಾಂ ಮಲ್ಲಿ, ಹೆ„ದ್ರೋಸಿ ಜುಮ್ಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.