Advertisement

ಬೆಂಗಳೂರು: ಅದ್ದೂರಿ “ಪುದ್ದರ್‌ ವಣಸ್‌’

01:42 PM Oct 03, 2018 | |

ಬೆಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುದ್ದಾರ್‌ ವಣಸ್‌(ಹೊಸ ಅಕ್ಕಿ ಊಟ) ಕಾರ್ಯಕ್ರಮ ಮಂಗಳವಾರ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ತುಳುಕೂಟ ಬೆಂಗಳೂರು ಕರಾವಳಿ ಭಾಗದ ಸಾಂಪ್ರದಾಯಿಕ ಆಚರಣೆಯಾಗಿರುವ “ಪುದ್ದಾರ್‌ ವಣಸ್‌’ನ್ನು ಇದೇ ಮೊದಲ ಬಾರಿಗೆ ತುಳುಕೂಟ ಬೆಂಗಳೂರು ಸಂಘಟನೆ ನಗರದಲ್ಲಿ ಆಯೋಜಿಸಿತ್ತು. ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹೂವಿನ ಅಲಂಕಾರ ಮಾಡಿ, ಹಸುರು ಚಪ್ಪರ ನಿರ್ಮಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದವರಿಗೆ 14 ಬಗೆಯ ಖಾದ್ಯದ ಭೋಜನದ ಜತೆಗೆ ಹೊಸ ಪೈರು ವಿತರಿಸಲಾಯಿತು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮಕ್ಕೆ ಆಗಮಿಸಿ, ಇಂಥ ಆಚರಣೆಗಳು ಸದಾಕಾಲ ಜೀವಂತ ವಾಗಿರಬೇಕು. ಕರಾವಳಿಯ ಸಂಭ್ರಮ, ಸಂಪ್ರದಾಯ ಸಂಸ್ಕೃತಿಯ ಪ್ರತೀಕ ಇದಾಗಿದೆ ಎಂದರು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next