Advertisement

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

10:12 PM Jul 16, 2020 | sudhir |

ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ನಡೆಸಲು ಮುಖ್ಯಮಂತ್ರಿಗಳು ಗುರುವಾರ ಅನುಮೋದನೆ ನೀಡಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು ಶುಕ್ರವಾರ ಅಥವಾ ಶನಿವಾರ ಕೌನ್ಸೆಲಿಂಗ್‌ ದಿನಾಂಕ ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಜು. 8ರಿಂದ ಕೌನ್ಸೆಲಿಂಗ್‌ ಪ್ರಾರಂಭವಾಗಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಆದೇಶದ ಮೇರೆಗೆ ಕೌನ್ಸೆಲಿಂಗ್‌ ಅನ್ನು ಮುಂದೂಡಲಾಗಿದೆಯಷ್ಟೇ. ಆದರೆ ಅದನ್ನು ರದ್ದುಗೊಳಿಸಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next