Advertisement

ದ್ವಿತೀಯ ಪಿಯುಸಿ ಸಾಧಕರು: ದೃಷ್ಟಿ ಸಮಸ್ಯೆಯಿದ್ದರೂ ತ್ರಿವಳಿಗಳ ಸಾಧನೆ

11:19 AM Jul 17, 2020 | mahesh |

ಸುರತ್ಕಲ್‌: ಸಾಧಿಸುವ ಛಲವಿದ್ದರೆ ಯಶಸ್ಸು ಸಾಧ್ಯ ಎಂಬುದನ್ನು ಕಾಟಿಪಳ್ಳದ ಶ್ರೀ ಬ್ರಹಶ್ರೀ ನಾರಾಯಣಗುರು ಪ.ಪೂ. ಕಾಲೇಜಿನ ತ್ರಿವಳಿ ಸಹೋದರರು ತೋರಿಸಿಕೊಟ್ಟಿದ್ದಾರೆ.

Advertisement

ದೃಷ್ಟಿ ದೋಷದಿಂದ ಬಳಲುತ್ತಿದ್ದರೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜೀವನ್‌ (577), ಜಯೇಶ್‌ (564) ಮತ್ತು ಜಿತೇಶ್‌(560) ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ. ಬಾಡಿಗೆ ಮನೆಯಲ್ಲಿರುವ ಕೃಷ್ಣಾಪುರ ವಿಶ್ವನಾಥ ದಂಪತಿಯ ಪುತ್ರರಾಗಿರುವ ಇವರು ತಂದೆಯ ಕೂಲಿ ಕೆಲಸ ಶ್ರಮದ ಹಣವನ್ನು, ಅವರ ನಿರೀಕ್ಷೆಯನ್ನು ಸಾರ್ಥಕಗೊಳಿಸಿದ್ದಾರೆ. ಕಣ್ಣಿನ ದೃಷ್ಟಿ ತೀರ ಮಂಜಾಗಿದ್ದು ವಿಶೇಷ ಕನ್ನಡಕ ಧರಿಸಬೇಕಾಗುತ್ತದೆ. ಕೆಲವೇ ಅಡಿಗಳ ದೂರವಿರುವ ವಸ್ತುಗಳನ್ನು ಗುರುತಿಸಲೂ ಕಷ್ಟ ಪಡುವ ಇವರು ಪುಸ್ತಕವನ್ನು ಅತೀ ಹತ್ತಿರದಿಂದ ಓದಿ ಮನನ ಮಾಡಿಕೊಳ್ಳ ಬೇಕಾದ ಸ್ಥಿತಿಯಿದೆ.

ಶಿಕ್ಷಕರು, ಪೋಷಕರ ಪ್ರೋತ್ಸಾಹದಿಂದ ಕಠಿನ ಪರಿಶ್ರಮದಿಂದ ಜಯೇಶ್‌ ಕಾಲೇಜಿನಲ್ಲಿ ಪ್ರಥಮ ಹಾಗೂ ಉಳಿದಿಬ್ಬರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಹೋದರರಿಗೆ ಚಾರ್ಟರ್ಡ್‌ ಅಕೌಂಟೆಂಟ್‌ ಆಗುವ ಕನಸಿದ್ದು ಮಂಗಳೂರಿನ ಕೆಲವು ಕಾಲೇಜುಗಳು ಪದವಿ ವ್ಯಾಸಂಗ ಕಲ್ಪಿಸಲು ಮುಂದೆ ಬಂದಿವೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಉಮೇಶ್‌ ಕರ್ಕೇರ.

Advertisement

Udayavani is now on Telegram. Click here to join our channel and stay updated with the latest news.

Next