Advertisement

ನಿತ್ಯ ಹಾಸಿಗೆ, ಆಕ್ಸಿಜನ್‌, ವೆಂಟಿಲೇಟರ್‌ ಮಾಹಿತಿ ಪ್ರಕಟಿಸಿ

03:12 PM Apr 21, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲುಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವಎಸ್‌.ಟಿ.ಸೋಮಶೇಖರ್‌ ಮಂಗಳವಾರಜಿಲ್ಲೆಯ ಉನ್ನತಾಧಿಕಾರಿಗಳ ಸಭೆ ನಡೆಸಿ,ಸಲಹೆ ಸೂಚನೆ ನೀಡಿದರು.

Advertisement

ಮಂಗಳವಾರ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿಸೋಂಕು ಹರಡುವಿಕೆಗೆ ಕಡಿವಾಣ ಹಾಕುವನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದಕ್ರಮಗಳನ್ನು ತಿಳಿಸಿದರು.

ಮುಂದಿನ ಹತ್ತುದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಬೆಡ್‌ಗಳನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದ್ದು, ಆಕ್ಸಿಜನ್‌, ವೆಂಟಿಲೇಟರ್‌ಬೆಡ್‌ಗಳು ಮತ್ತು ಲಸಿಕೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿಪ್ರತಿದಿನ ಸಾಮಾನ್ಯ ಹಾಸಿಗೆ ಲಭ್ಯತೆ,ಆಕ್ಸಿಜನ್‌ ಹಾಸಿಗೆ ಲಭ್ಯತೆ, ವೆಂಟಿಲೇಟರ್‌ಲಭ್ಯತೆ ಮುಂತಾದ ಮಾಹಿತಿಯನ್ನು ಪ್ರಕಟಿಸಿದರೆ ಜನರ ಆತಂಕ ಕಡಿಮೆಯಾಗುತ್ತದೆ.ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಇದೇ ರೀತಿ ಪ್ರಕರಣಗಳು ಹೆಚ್ಚಾದರೆತೊಂದರೆಯಾಗುತ್ತದೆ.

ಹೀಗಾಗಿಅಧಿಕಾರಿಗಳು ಸೋಂಕು ಹರಡುವಿಕೆಗೆಕಡಿವಾಣ ಹಾಕಬೇಕು ಎಂದು ಹೇಳಿದರು.ಕಳೆದ ವರ್ಷಕ್ಕಿಂತ ಕೋವಿಡ್‌ ಪ್ರಕರಣಗಳು ವೇಗವಾಗಿ ಹರಡುತ್ತಿವೆ. ಆದರೆಜನರು ಗಂಭೀರವಾಗಿ ತೆಗೆದು ಕೊಳ್ಳುತ್ತಿಲ್ಲ.ಸಭೆ ಸಮಾರಂಭಗಳಲ್ಲಿ ಸೀಮಿತ ಸಂಖ್ಯೆಯಜನರು ಭಾಗವಹಿಸುವಂತೆ ಕಟ್ಟುನಿಟ್ಟಿನಕ್ರಮವಹಿಸಬೇವೆ.

Advertisement

ಹೆಚ್ಚು ಜನ ಸೇರಿದರೆಸೋಂಕು ಹರಡುವಿಕೆ ಅಪಾಯ ಹೆಚ್ಚಾಗಿರುವುದರಿಂದ ಜನದಟ್ಟಣೆಯಾಗದಂತೆಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಲಸಿಕೆ: ಕೋವಿಡ್‌ ನಿರ್ವಹಣೆಗೆಸರ್ಕಾರದಿಂದ ಆಗಬೇಕಾದ ಕೆಲಸವನ್ನುಮಾಡಿಸಿಕೊಡಲಾಗುವುದು. ಲಸಿಕೆ ಮತ್ತುಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು.ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತಸೂಕ್ತವಾದ ಎಲ್ಲಾ ಕ್ರಮಗಳನ್ನುಕೈಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರಿಗೆತಿಳಿಸಬೇಕು ಎಂದರು.

ವಾಹನ ಜಪ್ತಿ: ಮೈಸೂರು ಜಿಲ್ಲೆ ಹಾಗೂತಾಲೂಕುಗಳಲ್ಲಿ ನಾಟಕ ಪ್ರದರ್ಶನಗಳುಹೆಚ್ಚಾಗಿ ಮೂಡಿಬರುತ್ತಿದ್ದು, ಅನುಮತಿಪಡೆಯದೆ ಯಾರಾದರೂ ನಾಟಕಗಳನ್ನುಮಾಡಿದರೆ ಅಂತಹ ವಾಹನಗಳನ್ನು ಜಪ್ತಿಮಾಡಲಾಗುವುದು ಎಂಬ ತೀರ್ಮಾನಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ,ಸಂಸದ ಪ್ರತಾಪ್‌ ಸಿಂಹ, ಮೇಯರ್‌ ರುಕ್ಮಿಣಿಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿಸಿಂಧೂರಿ, ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್‌ ಅಧೀಕ್ಷಕಸಿ.ಬಿ.ರಿಷ್ಯಂತ್‌, ವೈದ್ಯಕೀಯ ಕಾಲೇಜಿನಡೀನ್‌ ಡಾ.ನಂಜರಾಜ್‌, ಜಿಲ್ಲಾಸರ್ವೆàಕ್ಷಣಾಧಿಕಾರಿ ಡಾ. ಶಿವಪ್ರಸಾದ್‌,ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಬಿ.ಎಸ್‌.ಸೀತಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next