ಗಂಗಾವತಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಮತ್ತು ಆದಿಶಕ್ತಿ ಪಂಪಾಸರೋವರ ಭಾಗದಲ್ಲಿ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಭಿಕ್ಷಾಟನೆ ಮಾಡುತ್ತಿದ್ದು, ಇದರಿಂದ ದೇವಸ್ಥಾನಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಇರುಸು ಮುರುಸು ಉಂಟು ಮಾಡುತ್ತಿದೆ. ಇದನ್ನು ಕೂಡಲೇ ತಡೆಯುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಮತ್ತು ದೇವಸ್ಥಾನ ಕಮಿಟಿ ಅವರನ್ನು ಒತ್ತಾಯಿಸಿದ್ದಾರೆ .
ವಿಶೇಷವಾಗಿ ಶನಿವಾರ ರವಿವಾರ ಮಂಗಳವಾರ ಮತ್ತು ಹುಣ್ಣಿಮೆ ಅಮಾವಾಸ್ಯೆಗಳಂದು ಬೇರೆ ಬೇರೆ ಊರುಗಳಿಂದ ಮಕ್ಕಳನ್ನು ಕರೆದುಕೊಂಡು ಭಿಕ್ಷಾಟನೆ ಮಾಡಲು ಮಹಿಳೆಯರು ಗುಂಪು ಗುಂಪಾಗಿ ಆಗಮಿಸುತ್ತಾರೆ. ದೇವಸ್ಥಾನಕ್ಕೆ ಬರುವ ಸ್ಥಳೀಯ ಮತ್ತು ಬೇರೆ ವರ್ಣ ಭಕ್ತರಿಗೆ ಹಣ ನೀಡುವಂತೆ ಪೀಡಿಸುತ್ತಾರೆ ಅವರನ್ನು ದುಂಬಾಲು ಬೀಳುತ್ತಾರೆ ಇದರಿಂದ ಮುಜುಗರಕ್ಕೊಳಗಾದ ಕೊಡುತ್ತಿರುವ ಭಕ್ತರು ತಮ್ಮಲ್ಲಿರುವ ಬಿಡಿಗಾಸನ್ನು ಕೊಟ್ಟು ಮುಂದೆ ಹೋಗುತ್ತಾರೆ.
ಈಗಾಗಲೇ ಸರ್ಕಾರ ಮಕ್ಕಳು ಮತ್ತು ಭಿಕ್ಷಾಟನೆ ನಿಷೇಧ ಮಾಡಿದ್ದರೂ ಸ್ಥಳೀಯವಾಗಿ ಬೇರೆ ಬೇರೆ ಊರುಗಳಿಂದ ಆಗಮಿಸುವ ಭಿಕ್ಷುಕರು ನಿತ್ಯವೂ 500,1000,2000 ದುಡಿದುಕೊಂಡು ಹೋಗುತ್ತಿದ್ದು ನಾಗರಿಕ ಸಮಾಜ ಭಿಕ್ಷಾಟನೆಯ ಕೆಟ್ಟ ಪದ್ಧತಿಯಿಂದ ತಲೆತಗ್ಗಿಸುವಂತಾಗಿದೆ.
ಇದನ್ನೂ ಓದಿ: ಎಲ್ಲ ನಾಯಕರು ತಮ್ಮ ಸಮುದಾಯಗಳನ್ನು ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಿ: ಡಿಕೆ ಶಿವಕುಮಾರ್
ಕಾರ್ಮಿಕ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ ತಾಲ್ಲೂಕು ಆಡಳಿತ ಅಧಿಕಾರಿಗಳು ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಧಿಕಾರಿಗಳನ್ನೇ ಇಲ್ಲಿಯ ಭಿಕ್ಷುಕರು ಭಿಕ್ಷೆ ಕೇಳುವ ಹಂತಕ್ಕೆ ತಲುಪಿದ್ದು ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಿ ಭಿಕ್ಷೆ ಬೇಡುವವರನ್ನು ಸಂರಕ್ಷಣೆ ಮಾಡಿ ಸೂಕ್ತ ಬದುಕಿಗೆ ಆಶ್ರಯ ದೊರಕಿಸುವುದು ಸರಕಾರದ ಕರ್ತವ್ಯವಾಗಿದೆ.
ಅಂಜನಾದ್ರಿ ಬೆಟ್ಟದ ಸುತ್ತಲೂ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿ ಹಲವು ಭಿಕ್ಷುಕರು ಮಹಿಳೆಯರು ತಮ್ಮ ಮಕ್ಕಳನ್ನು ಎತ್ತಿಕೊಂಡು ಮಕ್ಕಳನ್ನು ತೋರಿಸಿ ಭಿಕ್ಷೆ ಎತ್ತುತ್ತಿರುವುದು ಕಂಡುಬರುತ್ತಿದೆ ಕೂಡಲೇ ಇದನ್ನು ತಡೆಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ .