Advertisement
ತಾಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡ ಮುದುವಾಡಿ ಗ್ರಾಪಂ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದಲ್ಲಿ ವೆಂಕಟೇಶ್ ಎಂಬುವವರು ಸಾರ್ವಜನಿಕ ರಸ್ತೆ ನಮ್ಮದೆಂದು ಓಡಾಡುವ ರಸ್ತೆಗೆ ಅಡ್ಡಲಾಗಿ ಏಕಾಏಕಿ ಬೇಲಿ ಹಾಕಿದ್ದಾರೆ. ಇದರಿಂದ ಆ ರಸ್ತೆಯಲ್ಲಿ ಓಡಾಡುವ ಸಾರಿಗೆ ಬಸು ಸೇರಿದಂತೆ ಕಾರು, ದ್ವಿಚಕ್ರ ವಾಹನ ಹಾಗೂ ಸರಕು ಸಾಗಣೆ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣಾ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಡ್ಡಲಾಗಿ ಹಾಕಿದ್ದ ಬೇಲಿ ತೆರವುಗೊಳಿಸಿ ವೆಂಕಟೇಶ್ ಕುಟುಂಬಕ್ಕೆ ಬಿಸಿ ಮುಟ್ಟಿಸಿದ್ದಾರೆ.
Related Articles
Advertisement
ಹಲವಾರು ವರ್ಷಗಳಿಂದ ಜನರಿಗೆ ತೊಂದರೆ: ಮತ್ತಿ ಕುಂಟೆ ಹಾಗೂ ಇನ್ನಿತರ ಗ್ರಾಮಗಳಿಗೆ ದೊಡ್ಡಮುದ ವಾಡಿ ಗ್ರಾಮದಿಂದ ಸಂಪರ್ಕ ಕಲ್ಪಿಸಲು ಪೂರ್ವಿಕರ ಕಾಲದಿಂದಲೂ ಓಣಿ ರಸ್ತೆ ಇತ್ತು. ಆ ರಸ್ತೆಯು ನಮಗೆ ಸೇರಿದ್ದು ಎಂದು ಇದೇ ಕುಟುಂಬದವರು ಹತ್ತು ದಿನಗಳ ಹಿಂದೆ ಸಾರ್ವಜನಿಕರು ಓಡಾಡದಂತೆ ಮಣ್ಣು ಸುರಿದು ತೊಂದರೆ ಕೊಡುತ್ತಿದ್ದರು. ಮತ್ತಿಕುಂಟೆ ಗ್ರಾಮದ ಬಹುತೇಕ ಜಾಗ ಗ್ರಾಮಠಾಣಾಕ್ಕೆ ಸೇರಬೇಕು. ವೆಂಕಟೇಶ್ ಎಂಬುವವರ ಕುಟುಂಬ ಇಡೀ ಗ್ರಾಮ ಠಾಣಾ ಜಾಗ ನಮಗೆ ಸೇರಬೇಕು ಎಂದು ಅಕ್ಕಪಕ್ಕದ ವಾಸಿಗಳಿಗೂ ಓಡಾಡಲು ರಸ್ತೆ ಬಿಡದೆ ಹಲವಾರು ವರ್ಷಗಳಿಂದ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಒತ್ತಾಯ : ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ತಾಲೂಕು ಆಡಳಿತ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ. ಈಗ ಸಾರ್ವಜನಿಕ ರಸ್ತೆಯೂ ನಮಗೆ ಸೇರಿದ್ದು ಎಂದು ಬೇಲಿ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಈ ಗ್ರಾಮದಲ್ಲಿರುವ ಗ್ರಾಮ ಠಾಣಾ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ ಗ್ರಾಮಸ್ಥರು ನೆಮ್ಮದಿಯಿಂದ ಬದು ಕುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮತ್ತಿಕುಂಟೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.