Advertisement

ಆಟಿಕೆ ಸಾಮಗ್ರಿ ಅಳವಡಿಕೆ ಕಾಮಗಾರಿ ಕಳಪೆ-ಆರೋಪ

03:39 PM Mar 14, 2021 | Team Udayavani |

ತಾವರಗೇರಾ: ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ನಡೆದ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಕೆಯ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಪಪಂ ಆಡಳಿತದಿಂದ ಮಾ. 7ರಂದು ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪೂರ ಚಾಲನೆ ನೀಡಿದ್ದರು. ಅದರಲ್ಲಿ ಇದು ಸಹ ಒಂದು. 2020 ಮತ್ತು 2021ನೇ ಸಾಲಿನ ಅನುದಾನದ ಕಾಮಗಾರಿಗಳನ್ನು ಆರ್ಥಿಕ ವರ್ಷದಕೊನೆಯಲ್ಲಿ ತುರ್ತಾಗಿ ಮುಗಿಸಿ ಬಿಲ್‌ಹೊತ್ತುವಳಿ ಕಾರ್ಯ ನಡೆಸಿದ್ದಾರೆ ಎಂದುಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರಕ್ಕೆ ಸರಿಯಾಗಿದೆ.

ಆದರೆ ಗುತ್ತಿಗೆದಾರರು 2 ವರ್ಷಮಾಡದಿರುವ ಕೆಲಸವನ್ನು ಮಾರ್ಚ್‌ ತಿಂಗಳಲ್ಲಿ ಆರಂಭಿಸಿದ್ದು ಎಷ್ಟು ಸರಿ, ಅಡಿಗಲ್ಲು ಹಾಕಿ ಕೇವಲ 7 ದಿನಗಳಲ್ಲಿ ಆಟಿಕೆ ಸಾಮಗ್ರಿಗಳನ್ನು ಉದ್ಯಾನವನದ ಹೊರ ಭಾಗದಲ್ಲಿ ಅಳವಡಿಸುತ್ತಿದ್ದಾರೆ. ಗುತ್ತೆದಾರರು ಮರಳು ಸಹ ಖರೀದಿ ಸಿಲ್ಲ.ಉದ್ಯಾನವನದ ಪಕ್ಕದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಗೋಪುರ ನಿರ್ಮಾಣ ಕಾಮಗಾರಿ ಮಾಡಿ ಬಿಟ್ಟಅಳಿದು, ಉಳಿದ ಮರಳು ಮತ್ತು ಜೆಲ್ಲಿಕಲ್ಲುಬಳಸಿಕೊಂಡು ಉದ್ಯಾನ ವನದಲ್ಲಿಆಟಿಕೆ ಸಾಮಗ್ರಿ ಅಳವಡಿಸುತ್ತಿದ್ದಾರೆ.ಪಟ್ಟಣ ಪಂಚಾಯತ್‌ ಆಡಳಿತವುಮೇಲ್ವಿಚಾರಣೆ ಮಾಡಿ ಗುಣಮಟ್ಟದಮಕ್ಕಳ ಆಟಿಕೆ ಸಾಮಗ್ರಿಅಳವಡಿಸವಂತಾಗಬೇಕು ಎಂದುಸಾರ್ವಜನಿಕರು ಈ ಮೂಲಕ ಒತ್ತಾಯಿಸಿದರು.

ಈ ಬಗ್ಗೆ ಮಾಹಿತಿ ಕೇಳಲು ಪಪಂ ಎಂಜನಿಯರ್‌ಶಿಲ್ಪಾ ಅವರಿಗೆ ಕರೆ ಮಾಡಿದಾಗಅವರು ಕರೆ ಸ್ವೀಕರಿಸಲಿಲ್ಲ. ಉದ್ಯಾನವನದಲ್ಲಿ ಮಕ್ಕಳ ಆಟಿಕೆಅಳವಡಿಕೆ ಕಾಮಗಾರಿ ಸ್ಥಳಕ್ಕೆ ಪಪಂ ಸಿಬ್ಬಂದಿ ಕಳಿಸಿ ಈ ಬಗ್ಗೆಪರೀಶಿಲಿಸಲಾಗುವುದು. – ವಿಕ್ರಮ್‌ ರಾಯ್ಕರ್‌, ಪಪಂ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next