ಡೊಂಬಿವಲಿ: ಸುವರ್ಣ ಮಹೋತ್ಸವವನ್ನು ಆಚರಿಸಿದ ತುಳು-ಕನ್ನಡಿಗರ ಪ್ರತಿಷ್ಠಿತ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳದ 53ನೇ ವಾರ್ಷಿಕ ನವರಾತ್ರಿ ಉತ್ಸವವು ಡೊಂಬಿವಲಿ ಪಶ್ಚಿಮದ ಕೇತಿ ಭವನದ ಸಮೀಪದಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ವೇದಮೂರ್ತಿ ಪಂಡಿತ್ ಶುಭಕರ ಭಟ್ ಅವರ ವೇದ, ಮಂತ್ರ-ಘೋಷಗಳ ಮಧ್ಯೆ ಶ್ರೀ ದೇವಿಯ ಪ್ರಾಣ ಪ್ರತಿಷ್ಠಾಪನೆ ಗುರುವಾರ ನೇರವೇರಿತು.
ಶ್ರೀ ದೇವಿಯ ಪ್ರತಿಮೆಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ನವರಾತ್ರಿಯ ಹಿಂದಿನ ಸೆ. 20ರಂದು ಸಂಜೆ ಶ್ರೀದೇವಿಯ ಮೂರ್ತಿಯನ್ನು ಡೊಂಬಿವಲಿ ಪೂರ್ವದ ಫಡೆR ರೋಡ್‌ನಿಂದ ಪಶ್ಚಿಮದ ಪೂಜಾ ಮಂಟಪದವರೆಗೆ ಅಲಂಕೃತ ವಾಹನದಲ್ಲಿ ವಿವಿಧ ವಾದ್ಯ ಘೋಷಗಳು, ನಾಡಿನ ಸಂಸ್ಕೃತಿ-ಸಂಸ್ಕಾರವನ್ನು ಬಿಂಬಿಸುವ ವೇಷಭೂಷಣಗಳು, ಪ್ರಾತ್ಯಕ್ಷಿಕೆ, ಭಜನೆ, ಸುಡುಮದ್ದುಗಳ ಕಲರವದೊಂದಿಗೆ ಕರೆತರಲಾಯಿತು. ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಂಡಳದ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷ ಗೋಪಾಲ ಶೆಟ್ಟಿ ಹಾಗೂ ಉತ್ಸವಕ್ಕೆ ಮೂರ್ತಿಯನ್ನು ಪ್ರಾಯೋಜಿಸಿದ ಉದ್ಯಮಿ ಕೆ. ಡಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಕಿಶೋರ್ ದಾಸು ಶೆಟ್ಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಗಣೇಶ್ ಶೆಟ್ಟಿ ಐಕಳ, ವೇಣುಗೋಪಾಲ ರೈ, ವಿಜೇತ ಶೆಟ್ಟಿ, ಪ್ರಭಾಕರ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ರಾಜೀವ ಭಂಡಾರಿ, ರವಿ ಸನಿಲ್, ಸತೀಶ್ ಕೋಟ್ಯಾನ್, ಅಜಿತ್ ಶೆಟ್ಟಿ, ರವಿ ಪೂಜಾರಿ, ಕಿರಣ್ ಶೆಟ್ಟಿ, ಮೋಹನ್ ಸಾಲ್ಯಾನ್, ನಿತ್ಯಾನಂದ ಜತ್ತನ್, ಭುಜಂಗ ಶೆಟ್ಟಿ, ಭಾಸ್ಕರ ಪೂಜಾರಿ, ಜಯರಾಮ ಶೆಟ್ಟಿ,ಜಯಪ್ರಸನ್ನ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ನಗರದ ವಿವಿಧ ತುಳು-ಕನ್ನಡಪರ, ಜಾತೀಯ ಸಂಘ ಟನೆಗಳಾದ ಡೊಂಬಿವಲಿ ಕರ್ನಾಟಕ ಸಂಘ, ತುಳುನಾಡ ವೆಲ್ಫೆàರ್ ಅಸೋಸಿಯೇಶನ್, ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಸಮಿತಿ, ಮೊಗವೀರ ಸಂಘ ಡೊಂಬಿವಲಿ ಸ್ಥಳೀಯ ಕಚೇರಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಕುಲಾಲ ಸಂಘ ಡೊಂಬಿವಲಿ ಸ್ಥಳೀಯ ಕಚೇರಿ, ಅಜೆªಪಾಡಾ ಶ್ರೀ ಅಯ್ಯಪ್ಪ ಸೇವಾ ಸಂಸ್ಥೆ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು, ತುಳು-ಕನ್ನಡಿಗ ಭಕ್ತಾದಿಗಳು ಪಾರಂಪರಿಕ ವೇಷ ಭೂಷಣಗಳೊಂದಿಗೆ ಮೆರವಣಿಗೆಗೆ ಮೆರುಗು ನೀಡಿದರು.
ನವರಾತ್ರಿಯ ಅಂಗವಾಗಿ ಆಯೋಜಿ ಸಲಾಗಿದ್ದ ಅನ್ನದಾಸೋಹದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸೆ. 21ರಿಂದ ಸೆ. 30 ರವರೆಗೆ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಇದೆ ಸಂದರ್ಭದಲ್ಲಿ ಮಂಡಳದ ಪದಾಧಿಕಾರಿಗಳು ತಿಳಿಸಿದರು.