ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಎಲ್ಲ ಕಚೇರಿಗಳು ಹಾಗೂ ಶಾಲಾ ಹಂತದಲ್ಲಿ ಪದನಾಮ ಬದಲಾವಣೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸಚಿವಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂದು
ಮರುಪದನಾಮೀಕರಣಗೊಳಿಸಿ ಆದೇಶಿಸಲಾಗಿರುತ್ತದೆ.
ಕರ್ನಾಟಕ ಸರ್ಕಾರದ ನಿಯಮಗಳು-1977 ಅನುಸೂಚಿ-5 ರಲ್ಲಿದ್ದ ಶಿಕ್ಷಣ ಇಲಾಖೆ ಶೀರ್ಷಿಕೆಗೆ ಕೂಡ ತಿದ್ದುಪಡಿ ತರಲಾಗಿದೆ.
ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲ ಕ್ಷೇತ್ರ ಕಚೇರಿಗಳು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕ್ಲಸ್ಟರ್ ಶಾಲೆಗಳು ಮತ್ತು ಕಚೇರಿಗಳ ನಾಮಫಲಕಗಳನ್ನು “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂಬ ನೂತನ ಪದನಾಮಕ್ಕೆ ಸರಿಹೊಂದುವಂತೆ ಬದಲಾಯಿಸಲು ಆದೇಶಿಸಿದೆ.