Advertisement
ಕಾಂಗ್ರೆಸ್ ಸರಕಾರದ ನಡೆಯು ರಾಜ್ಯವನ್ನು ಹಿಂದಕ್ಕೆ ತಳ್ಳುತ್ತಿದೆ. ಸಾರಾಸಗಟಾಗಿ ಎನ್‌ಇಪಿಯನ್ನು ಹಿಂಪಡೆಯುವ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಮಕ್ಕಳ ಶಿಕ್ಷಣದಲ್ಲಿ ಆಟವಾಡುವುದು ಸಲ್ಲದು. ಒಂದು ವೇಳೆ ಎನ್‌ಇಪಿಯಲ್ಲಿ ಲೋಪದೋಷಗಳಿದ್ದರೆ ಅದರಲ್ಲಿ ಪರಿಷ್ಕರಣೆ ಮಾಡಿ ಸುಧಾರಣೆ ತರಬೇಕೇ ವಿನಾ ನೀತಿಯನ್ನು ಕೈ ಬಿಡುತ್ತೇವೆ ಎಂಬ ಸರಕಾರದ ಹಠಮಾರಿ ಧೋರಣೆ ಒಳ್ಳೆಯದಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.ರಾಜ್ಯದ ನಡೆಯನ್ನು ಖಂಡಿಸಿ ಮತ್ತು ಎನ್‌ಇಪಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜನಾಂದೋಲನ ರೂಪಿಸಲು ಪೂರಕವಾಗಿ ಶೀಘ್ರದಲ್ಲೇ ಪ್ರತೀ ಜಿಲ್ಲೆಗೂ ತೆರಳಿ ಶಿಕ್ಷಣ ತಜ್ಞರ ಸಭೆ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಸೆ. 28ರಿಂದ ಬಿಜೆಪಿ ನಡೆಸುವ ಪ್ರತಿಭಟನೆಗಳಲ್ಲಿಯೂ ಎನ್‌ಇಪಿ ಹಿಂದೆಗೆದುಕೊಳ್ಳುವುದು ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್)ಯಡಿ ಶಾಲೆಗಳ ನಿರ್ವಹಣೆಯನ್ನು ಖಾಸಗಿಗೆ ನೀಡುವ ಸರಕಾರದ ಚಿಂತನೆಯ ವಿರುದ್ಧ ಧ್ವನಿ ಎತ್ತುವ ನಿರ್ಧಾರಕ್ಕೆ ಬರಲಾಗಿದೆ.