Advertisement

ತಾತ್ಕಾಲಿಕ ವೇಳಾಪಟ್ಟಿ : ಏ.22-ಮೇ 11 ದ್ವಿತೀಯ ಪಿಯು ಪರೀಕ್ಷೆ

11:02 PM Mar 02, 2022 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮೂರನೇ ಬಾರಿಗೆ ಮುಂದೂಡಿ ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

Advertisement

ಅದರ ಪ್ರಕಾರ ಏ.22ರಿಂದ ಮೇ 11ರವರೇಗೆ ಪರೀಕ್ಷೆಗಳು ನಡೆಯಲಿವೆ. ಮಂಗಳವಾರವಷ್ಟೇ ಜೆಇಇ ವೇಳಾ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲು ಮಾಡಲಾಗಿದೆ.

ಈ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು/ಪೋಷಕರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಮಾ.5ರ ಸಂಜೆ 5 ಗಂಟೆವರೆಗೆ ಸಮಯ ನೀಡಲಾಗಿದೆ.

ಆಕ್ಷೇಪಣೆಗಳನ್ನು jdexam.dpue@gmail.com ಗೆ ಕಳುಹಿಸುವಂತೆ ತಿಳಿಸಲಾಗಿದೆ. ಅಂಚೆ ಮೂಲಕ ಕಳುಹಿಸುವಂತಹ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪಿಯು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next