Advertisement

ಪಿಯು ಶಿಕ್ಷಣ ಜೀವನದಲ್ಲಿ ಬದಲಾವಣೆ ಹಂತ

04:45 PM Mar 13, 2022 | Team Udayavani |

ಬೆಳಗಾವಿ: ಸಾಧಕನಿಗೆ ಸುಖ ಬೇಕಾದರೆ ವಿದ್ಯೆ ತ್ಯಾಗ ಮಾಡಬೇಕು, ವಿದ್ಯೆ ಬೇಕಾದರೆ ಸುಖ ತ್ಯಾಗ ಮಾಡಬೇಕು. ಪಿಯುಸಿ ಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆ ಹಂತ ಈ ಅವಧಿಯಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿ, ಜ್ಞಾನ ಸಂಪಾದಿಸಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಡಾ| ಅಲ್ಲಮ ಪ್ರಭು ಸ್ವಾಮೀಜಿ ಹೇಳಿದರು.

Advertisement

ನಗರದ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಅವರು ಮಾತನಾಡಿದರು.

ಬೆಳಗಾವಿ ಲೋಕಾಯುಕ್ತ ಎಸ್‌.ಪಿ. ಯಶೋಧಾ ವಂಟಗೋಡಿ ಮಾತನಾಡಿ, ಸಿದ್ಧರಾಮೇಶ್ವರ ಶಿಕ್ಷ ಣ ಸಂಸ್ಥೆಯಲ್ಲಿ ಶಿವಬಸವ ಸ್ವಾಮೀಜಿ ತಪೋ ಬಲದಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಂಸ್ಥೆಯಲ್ಲಿ ಓದುತ್ತಿರುವವರು ಪುಣ್ಯವಂತರು. ಹೆಣ್ಣು-ಗಂಡು ಎಂಬ ತಾರತಮ್ಯ ಭಾವನೆ ಬೇಡ, ಇಬ್ಬರೂ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ಛಲವಿರಬೇಕು. ಜ್ಞಾನದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್‌ ಪ್ರೊ| ಎಂ.ಆರ್‌. ಉಳ್ಳೇಗಡ್ಡಿ ಅವರು, ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ನಗದು ಬಹುಮಾನ ನೀಡಿ, ದುಡಿಮೆ, ಪರಿಶ್ರಮ, ನಿಷ್ಠೆಯಿಂದ ಅಧ್ಯಯನ ಮಾಡಿ, ಓದುವುದನ್ನು ಒಂದು ತಪಸ್ವನ್ನಾಗಿ ಮಾಡಿಕೊಳ್ಳಿ ಪ್ರಯತ್ನ ಪಡದೇ ಯಾವುದೂ ಸಿದ್ಧಿಯಾಗದು ಎಂದರು.

Advertisement

ಸರಕಾರದ ಸರ್ವೊತ್ತಮ ಪ್ರಶಸ್ತಿ ಪಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರವಿ ಪರವಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಪ್ರೊ| ಬಿ.ಎಂ. ಬೆಳಗಲ್ಲಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಸಂಸ್ಥೆಯಲ್ಲಿ 1 ಲಕ್ಷ ರೂ.ಗಳನ್ನು ಠೇವಣಿಯಾಗಿ ಇಡುವ ವಾಗ್ಧಾನ ಮಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ| ಸಿದ್ಧರಾಮ ರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ, ಸದಸ್ಯರಾದ ಆರ್‌.ಬಿ. ಪಾಟೀಲ, ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ| ಪ್ರವೀಣ ಪಾಟೀಲ ಉಪಸ್ಥಿತರಿದ್ದರು. ಉಪನ್ಯಾಸಕರಾದ ಎ.ಕೆ. ಪಾಟೀಲ ಸ್ವಾಗತಿಸಿದರು. ಗಿರಿಜಾ ಸುಂಕದ, ಶಶಿಕಲಾ ಹುಬ್ಬಳ್ಳಿ ನಿರೂಪಿಸಿದರು. ಕೀರ್ತಿ ಕರೀಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next