Advertisement

ಪಿಯು ಬೋರ್ಡ್ ಪ್ರಮಾದ; ಉತ್ತರ ಪ್ರತಿಯಲ್ಲಿ 96 ಅಂಕ ಬಂದಿದ್ದರೂ ಅಂಕಪಟ್ಟಿಯಲ್ಲಿ ಮಾತ್ರ 90

06:04 PM May 03, 2023 | Team Udayavani |

ಸಾಗರ: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 2023ನೇ ಸಾಲಿನ ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆಯಲ್ಲಿ ಪಡೆದ ಅಂಕಗಳಿಗೂ ಹಾಗೂ ಆಕೆಗೆ ನೀಡಿದ ಅಂಕಪಟ್ಟಿಯಲ್ಲಿ ನಮೂದಿಸಿದ ಅಂಕಗಳಿಗೂ ಬರೋಬ್ಬರಿ ಆರು ಅಂಕಗಳ ವ್ಯತ್ಯಾಸವಾಗಿರುವುದು ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಖಾಸಗಿ ಕಾಲೇಜೊಂದರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಫಲಿತಾಂಶ ಬಂದಾಗ ಅರ್ಥಶಾಸ್ತ್ರ ಪತ್ರಿಕೆಯಲ್ಲಿ 90 ಅಂಕ ಬಂದಿರುವುದನ್ನು ಗಮನಿಸಿ, ಮೌಲ್ಯಮಾಪನದಲ್ಲಿ ಅಂಕ ಕಡಿಮೆಯಾಗಿದೆ ಎಂದು ಭಾವಿಸಿ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ತರಿಸಿದಾಗ ಬೆಚ್ಚಿ ಬಿದ್ದಿದ್ದಾರೆ.

ಉತ್ತರ ಪ್ರತಿಯಲ್ಲಿ 96 ಅಂಕ ಬಂದಿದ್ದರೂ ಅಂಕಪಟ್ಟಿಯಲ್ಲಿ 90 ಅಂಕ ಮಾತ್ರ ನೀಡಲಾಗಿತ್ತು. ಉತ್ತರ ಪತ್ರಿಕೆಯಲ್ಲಿ ಅಕ್ಷರಗಳಲ್ಲೂ 96 ಎಂಬುದನ್ನು ನಮೂದಿಸಲಾಗಿದೆ. ಈಗ ರೀ ಟೋಟಲ್ ಮತ್ತು ರೀ ಕೌಂಟಿಂಗ್ ಮೂಲಕ ಈ ದೋಷವನ್ನು ಸರಿಪಡಿಸಿಕೊಳ್ಳಲು ವಿದ್ಯಾರ್ಥಿನಿ ಮುಂದಾಗಿದ್ದಾರೆ. ಮೌಲ್ಯಮಾಪನ ಪ್ರಕ್ರಿಯೆಯ ನಂತರ ಅಂಕವನ್ನು ಗಣಕಯಂತ್ರಕ್ಕೆ ದಾಖಲಿಸುವ ಹಂತದಲ್ಲಿ ಈ ವ್ಯತ್ಯಾಸ ಉಂಟಾಗಿರಬಹುದು. ಈ ರೀತಿಯ ವ್ಯತ್ಯಾಸ ಸಾಮಾನ್ಯವಾದ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ. ಎರಡು ಮೂರು ಹಂತಗಳ ಪರಿಶೀಲನೆಯ ನಂತರ ಈ ಅಂಕ ನಮೂದಿಸಲಾಗುತ್ತದೆ. ಇಂತಹ ನಿರ್ಲಕ್ಷ್ಯ ಅಕ್ಷಮ್ಯ ಎಂದು ಅಧ್ಯಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆರು ಅಂಕಗಳ ಕಾರಣಕ್ಕಾಗಿಯೇ ವಿದ್ಯಾರ್ಥಿನಿಗೆ ವಿಷಯದಲ್ಲಿ ಹಾಗೂ ಕಾಲೇಜಿನಲ್ಲಿ ಅಗ್ರ ಸ್ಥಾನ ತಪ್ಪಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ದೊಡ್ಡ ಪ್ರಮಾಣದಲ್ಲಿಯೇ ಅನ್ಯಾಯವಾದಂತಾಗಿದೆ ಎನ್ನುವಂತಾಗಿದೆ.

ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ; Viral Video 

Advertisement

Udayavani is now on Telegram. Click here to join our channel and stay updated with the latest news.

Next