ಮಂಡ್ಯ: ಸಿಎಂ ಯಡಿಯೂರಪ್ಪ ಅವರು ಜಿಲ್ಲೆಯ ಪಿಎಸ್‌ಎಸ್‌ಕೆ ಹಾಗೂ ಮೈಷುಗರ್ ಕಾರ್ಖಾನೆಯ ಆರಂಭದ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲುವು ಹೊಂದಿದ್ದು, ಶೀಘ್ರ ಎರಡೂ ಕಾರ್ಖಾನೆಗಳನ್ನು ಆರಂಭಿಸಲಿದ್ದಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ನಗರದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಮಂಡ್ಯ ಹಾಲು ಒಕ್ಕೂಟ ಇತರೆ ಸಹಕಾರ ಸಂಘದಿಂದ ನಡೆದ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಮೈಷುಗರ್ ವ್ಯಾಪ್ತಿಗೆ ಕಬ್ಬು ಸರಬರಾಜು ಮಾಡುವ 135 ಹಳ್ಳಿಗಳು ಮಂಡ್ಯ ತಾಲೂಕಿನಲ್ಲೇ ಇವೆ. ಬೇರೆ ಯಾವ ತಾಲೂಕುಗಳಿಂದಲೂ ಇಲ್ಲಿಗೆ ಕಬ್ಬು ಸರಬರಾಜಾ ಗುವುದಿಲ್ಲ. ಆದರೂ ಏಕೆ ಇಷ್ಟೊಂದು ಗುಂಪುಗಾರಿಕೆ ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.
ನಾವು ಬೇರೆ ಕಡೆ ರಾಜಕಾರಣ ಮಾಡೋಣ. ಆದರೆ, ರೈತರ ಬದುಕಿನಲ್ಲಿ ಆಟವಾಡುವುದು ಸರಿಯಲ್ಲ ಎಂದರು. ಸದ್ಯದಲ್ಲೇ ಆರಂಭ: ಈಗಾಗಲೇ ಪಿಎಸ್‌ಎಸ್ ಕೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾ ಗಿದ್ದು, ಅದು ಸದ್ಯದಲ್ಲೇ ಆರಂಭವಾಗುವ ಹಂತದಲ್ಲಿದೆ. ಇನ್ನು ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಒ ಅಂಡ್ ಎಂ ಮೂಲಕ ಆರಂಭಿಸಲು ಈಗಾಗಲೇ ಕಾರ್ಖಾನೆ ನಡೆಸು ತ್ತಿರುವವರ ಸಮಿತಿ ರಚಿಸಿ, ಅವರ ಸಲಹೆ ಯಂತೆ ಕಾರ್ಖಾನೆಗೆ ಜೀವ ನೀಡಲು ಎಲ್ಲ ಸಿದಟಛಿತೆ ನಡೆಸಲಾಗಿದೆ ಎಂದು ಹೇಳಿದರು.
ಅಗತ್ಯ ಕ್ರಮ: ಲಾಕ್‌ಡೌನ್ ಸಂದರ್ಭದಲ್ಲಿ ಸಹಕಾರ ಸಚಿವರು ರೈತರ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಗಮನ ನೀಡಿದ ಪರಿಣಾಮ ಬೆಂಗಳೂ ರಿನ ಮಾರುಕಟ್ಟೆಯೊಂದರಲ್ಲೇ ಸುಮಾರು 150 ಟನ್ ತರಕಾರಿ ಮಾರಾಟವಾಗುದೆ. ಅದಕ್ಕೂ ಹಿಂದೆ ಕೇವಲ 30ರಿಂದ 40 ಟನ್ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಇದರಿಂ ದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು.
ಈ ಕಾರ್ಯದಲ್ಲಿ ಸಚಿವರಾದ ಬಿ.ಸಿ. ಪಾಟೀಲ್, ಗೋಪಾಲಯ್ಯ, ಸೋಮಶೇಖರ್ ಮತ್ತು ನಾನು ಎಲ್ಲ ಅಗತ್ಯ ಕ್ರಮ ಕೈಗೊಂಡಿ ದ್ದೆವು ಎಂದು ವಿವರಿಸಿದರು. ಸಂಸದೆ ಸುಮಲತಾ ಅಂಬರೀಶ್, ಶಾಸಕ ಎಂ. ಶ್ರೀನಿವಾಸ್, ಡೀಸಿ ಡಾ.ಎಂ.ವಿ. ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಇದ್ದರು.
ಮೈಷುಗರ್ ಕಾರ್ಖಾನೆ ಆರಂಭದ ವಿಚಾರವಾಗಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಸ್ತುವಾರಿ ಸಚಿವ ನಾರಾಯಣಗೌಡರು ಬೇಡಿಕೆ ಇಟ್ಟ ಯಾವುದಕ್ಕೂ ಸಿಎಂ ನಿರಾಕರಿಸಿಲ್ಲ. ತಮ್ಮ ತವರಿನ ಮೇಲಿರುವ ಕಾಳಜಿ ತೋರುತ್ತದೆ.
-ಎಸ್.ಟಿ. ಸೋಮಶೇಖರ್, ಸಹಕಾರ ಸಚಿವ