Advertisement

ಪಿಎಸ್‌ಎಸ್‌ಕೆ ಗುತ್ತಿಗೆ ರದ್ದತಿಗೆ ಆಗ್ರಹ

05:39 AM Jun 09, 2020 | Lakshmi GovindaRaj |

ಮಂಡ್ಯ: ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಷುಗರ್ ನವರಿಗೆ 40 ವರ್ಷ ಗುತ್ತಿಗೆ ನೀಡಿರುವು ದನ್ನು ಸರ್ಕಾರ ರದ್ದುಪಡಿಸಿ, ಸರ್ಕಾರವೇ ಕಾರ್ಖಾನೆಯನ್ನು ಸುಸ್ಥಿರಗೊಳಿ ಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ  ಪರವಾಗಿ ಸುನಂದಾ ಜಯರಾಂ ಆಗ್ರಹಿಸಿದರು.

Advertisement

ಪಿಎಸ್‌ಎಸ್‌ಕೆ 11,900 ರೈತರ 805.85 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. ಸರ್ಕಾರ ಸಕ್ಕರೆ ಲಾಬಿಗೆ ಮಣಿದು ಮಾಜಿ ಮಂತ್ರಿ ಮುರುಗೇಶ್‌ ನಿರಾಣಿ ಮಾಲೀಕತ್ವದ ಕಂಪನಿಗೆ 40 ವರ್ಷ  ಗುತ್ತಿಗೆ ನೀಡಿರುವುದು ಜಿಲ್ಲೆಯ ರೈತರಿಗೆ ಮಾಡಿದ ದ್ರೋಹ ಎಂದು ಸುದ್ದಿ ಗೋಷ್ಠಿಯಲ್ಲಿ ಟೀಕಿಸಿದರು. ಸಿಎಂ ಜಿಲ್ಲೆಯ ಬಗ್ಗೆ ಭಾವನಾತ್ಮಕವಾಗಿ ಚಿಂತಿ ಸಿದ್ದರೆ ಗುತ್ತಿಗೆ ಕೊಡುವ ಕೆಲಸಕ್ಕೆ ಮುಂದಾಗುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ.

ಟೆಂಡರ್‌ ರದ್ದುಪಡಿಸ ಬೇಕು. ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿ ಅಭಿವೃದಿಪಡಿಸಬೇಕು. ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಿ ಹಳೇ ಮೈಸೂರು ಭಾಗದ ಕಬ್ಬು ಬೆಳೆ ಗಾರರು ಮತ್ತು ನೌಕರರನ್ನು ಸಂರಕ್ಷಿಸ ಬೇಕು ಎಂದು  ಆಗ್ರಹಿಸಿದರು. ರೈತರು ಬೆಳೆದಿರುವ ಕಬ್ಬನ್ನು ಜುಲೈನಲ್ಲಿಯೇ ನುರಿಸಬೇಕು. ರೈತರಿಗೆ ತೊಂದರೆ ಆಗಬಾರದು ಎಂದು ಈಗಾಗಲೇ ಎಲ್ಲ ಜನಪರ ಸಂಘಟನೆ ಗಳು ಪ್ರತಿಭಟನೆ ಮಾಡಿ, ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸಲಾಗಿದೆ.

ಆದ ಕಾರಣ ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಿಲ್ಲ. ಮೈಷು ಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎನ್ನುವುದು ಎಲ್ಲರ ಪ್ರಯತ್ನವಾಗಬೇಕು ಎಂದರು. ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್‌,  ಎಂ.ಬಿ.ಶ್ರೀನಿ ವಾಸ್‌, ಸಿ.ಕುಮಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next