Advertisement

ಸೋರಿಯಾಸಿಸ್‌, ಕಪಾಣಿಗೆ ಮದ್ದುಂಟು…

12:13 PM Dec 30, 2017 | |

ಕಪಾಣಿ, ಇಸುಬು, ಕಜ್ಜಿ, ಕ್ಷಯ, ಸರ್ಪಸುತ್ತು, ಬಿಳಿಮಚ್ಚೆ, ಸೋರಿಯಾಸಿಸ್‌ ನಂಥ ಚರ್ಮರೋಗಗಳಿಗೆ ಚಿಕಿತ್ಸೆ ಬೇಕೆನ್ನುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಬೈಚಾಪುರಕ್ಕೆ ಬರಬೇಕು. ಇಲ್ಲಿರುವ ವೈದ್ಯ ವೆಂಕಟರಾಜು ಅವರು ತಲೆತಲಾಂತರದಿಂದ ಬಂದ ನಾಟಿ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾಗೆ ನೋಡಿದರೆ ಇದು ಅವರಿಗೆ ಪ್ರವೃತ್ತಿ. ವೆಂಕಟರಾಜು ವೃತ್ತಿಯಿಂದ  ಕೃಷಿಕರು. ಭಾನುವಾರ-ಗುರುವಾರದಂದು ಮಾತ್ರ ಇವರು ಔಷಧ ಕೊಡುತ್ತಾರೆ. ಇತರೆ ದಿನಗಳಲ್ಲಿ ಕೃಷಿಯಲ್ಲಿ ಮಗ್ನರಾಗುತ್ತಾರೆ. ಭೈಚಾಪುರದಲ್ಲಿ ಒಂದೂವರೆ ಎಕರೆಯಲ್ಲಿ ತರಕಾರಿ ಮತ್ತು ಹೂವನ್ನು ಬೆಳೆಯುತ್ತಿದ್ದಾರೆ. 

Advertisement

ನನ್ನ ತಂದೆ ರಾಮಯ್ಯ 95ನೇ ವಯಸ್ಸಿನವರೆಗೂ ಔಷಧ ಕೊಡುತ್ತಿದ್ದರು. ಅದನ್ನೀಗ ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ನಾವು ನೀಡುವ ಸಂಜೀವಿನಿ ಲೇಪನದಿಂದ ಮೈಮೇಲೆ ಆಗಿರುವ ಗಾಯ ಮಂಗಮಾಯವಾಗುತ್ತದೆ. ಗಡ್ಡೆ ಕಟ್ಟಿದ್ದರೆ ಕರಗುತ್ತದೆ. ಕೀವು ಇದ್ದರೆ ಸುಲಭವಾಗಿ ಹೊರ ಬರುತ್ತದೆ.   ಬಿಳೆ ಮಚ್ಚೆ (ತೊನ್ನು)ವಿಗೆ ಒಂದು ವರ್ಷಗಳ ಕಾಲ ಔಷಧಿಯನ್ನು ಕೊಡುತ್ತೇವೆ. ರೋಗದ ಆರಂಭದಲ್ಲೇ ಬಂದರೆ ಮೂರು ತಿಂಗಳಿನೊಳಗಾಗಿ ಮಚ್ಚೆಗಳು ಹೋಗುತ್ತವೆ. ಗ್ಯಾಂಗ್ರೀನ್‌ ಸಮಸ್ಯೆಯಿಂದ ಜನ ಕಾಲು ಕಳೆದುಕೊಂಡಿರುವುದನ್ನು ನೋಡಿದ್ದೇವೆ. ಗ್ಯಾಂಗ್ರೀನ್‌ ಇದ್ದವರು ತಕ್ಷಣವೇ ಔಷಧಿ ತೆಗೆದುಕೊಂಡರೆ ಕಾಲು ತೆಗೆಯುವ ಪ್ರಮೇಯ ಇರುವುದಿಲ್ಲ. ನಮ್ಮಲ್ಲಿ 20 ತರಹದ ಔಷಧಿಯನ್ನು ಕೊಡುತ್ತಿದ್ದೇವೆ ಎನ್ನುತ್ತಾರೆ ವೆಂಕಟರಾಜು.   ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಇತರೆ ಕಡೆಗಳಿಂದ ಔಷಧ ಪಡೆಯಲು ಬರುತ್ತಾರೆ. 

 ಚಿಕಿತ್ಸೆ ದಿನ-  ಗುರುವಾರ, ಭಾನುವಾರ
 ಮಾಹಿತಿಗೆ – 9880078519 

 ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next