Advertisement
ತಲಸ್ಸೇಮಿಯಾ ಎಂಬುದು ವಂಶಪಾರಂಪರ್ಯವಾಗಿ ಬರುವ ಒಂದು ರಕ್ತಸಂಬಂಧಿ ಅನಾರೋಗ್ಯ. ಹಿಮೊಗ್ಲೋಬಿನ್ ಉತ್ಪಾದನೆ ಕಡಿಮೆಯಾಗಿ ತೀವ್ರ ತರಹದ ರಕ್ತಹೀನತೆ ಮತ್ತು ಇದರಿಂದಾಗಿ ಇತರ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಿಸುವುದು ಇದರ ಗುಣಲಕ್ಷಣವಾಗಿದೆ. ಅದರಲ್ಲೂ, ಬೀಟಾ (β) ತಲಸ್ಸೇಮಿಯಾ ಮೇಜರ್ ಇದರಲ್ಲಿ ತೀವ್ರ ತರಹದ್ದಾಗಿದ್ದು, ನಿಯಮಿತ ರಕ್ತಮರುಪೂರಣಗಳು ಮತ್ತು ಅಪಾಯಕಾರಿಯಾದ ಕಬ್ಬಿಣದಂಶ ಸಂಗ್ರಹಣೆಯನ್ನು ನಿವಾರಿಸಲು ಐಯರ್ನ್ ಚೆಲೇಶನ್ ಚಿಕಿತ್ಸೆಯಂತಹ ಜೀವನಪರ್ಯಂತ ನಿರ್ವಹಣೆಯ ಕ್ರಮಗಳು ಇದಕ್ಕೆ ಅಗತ್ಯವಾಗಿರುತ್ತವೆ.
Related Articles
Advertisement
ತಲಸ್ಸೇಮಿಯಾಕ್ಕೆ ಲಭ್ಯವಿರುವ ಅಸ್ಥಿಮಜ್ಜೆ ಕಸಿ ವಿಧಗಳು
ಹೊಂದಾಣಿಕೆಯಾಗುವ ಸಂಬಂಧಿಯ/ ಸಂಬಂಧಿಯಲ್ಲದ ದಾನಿಯಿಂದ ಕಸಿ ತಲಸ್ಸೇಮಿಯಾಕ್ಕೆ ಲಭ್ಯವಿರುವ ಅತೀ ಸಾಮಾನ್ಯ ಅಸ್ಥಿಮಜ್ಜೆ ಕಸಿ ವಿಧಾನ ಇದು. ಇದರಲ್ಲಿ ಆಕರ ಕೋಶ ದಾನಿ ಎಚ್‌ಎಲ್‌ಎ ಪೂರ್ಣವಾಗಿ ಹೊಂದಾಣಿಕೆಯಾಗುವ ಸಹೋದರ -ಸಹೋದರಿಯರು ಅಥವಾ ಸಂಬಂಧಿಯಲ್ಲದ ದಾನಿ ಆಗಿರುತ್ತಾರೆ. ಆದರೆ ಎಚ್‌ಎಲ್‌ಎ ಹೊಂದಾಣಿಕೆಯಾಗುವ ಸಂಬಂಧಿ ದಾನಿ ಅಥವಾ ಹೊಂದಾಣಿಕೆಯಾ ಗುವ ಸಂಬಂಧಿಯಲ್ಲದ ದಾನಿಯನ್ನು ಹೊಂದಿರುವ ರೋಗಿಗಳ ಪ್ರಮಾಣ ಶೇ. 30ಕ್ಕಿಂತಲೂ ಕಡಿಮೆ ಇರುತ್ತದೆ.
ಹಾಪ್ಲೊ ಐಡೆಂಟಿಕಲ್ ಕಸಿ ಪೂರ್ಣವಾಗಿ ಸರಿಹೊಂದುವ ದಾನಿ ಅಲಭ್ಯವಾಗಿದ್ದಾಗ, ಹಾಪ್ಲೊ ಐಡೆಂಟಿಕಲ್ ಕಸಿಗಳು ಅಂದರೆ, ಭಾಗಶಃ ಹೊಂದಾಣಿಕೆಯಾಗುವ ಕುಟುಂಬ ಸದಸ್ಯರ ಆಕರ ಕೋಶಗಳನ್ನು ಉಪಯೋಗಿಸಿ ಮಾಡುವ ಕಸಿ ಒಂದು ವಿಶ್ವಾಸಾರ್ಹ ಪರ್ಯಾಯವಾಗಿರುತ್ತದೆ. ದಾನಿಗಳ ಆಯ್ಕೆ ಮತ್ತು ಕಸಿ ತಂತ್ರಜ್ಞಾನಗಳಲ್ಲಿ ಆಗಿರುವ ಅತ್ಯಾಧುನಿಕ ಪ್ರಗತಿಗಳಿಂದಾಗಿ ಈ ಕಾರ್ಯವಿಧಾನವು ಮುಂಚೂಣಿಗೆ ಬರುತ್ತಿದ್ದು, ಹೆಚ್ಚು ಸಂಖ್ಯೆಯ ರೋಗಿಗಳಿಗೆ ಲಭ್ಯವಾಗುತ್ತಿದೆ.
ತಲಸ್ಸೇಮಿಯಾಕ್ಕೆ ಹಾಪ್ಲೊ ಐಡೆಂಟಿಕಲ್ ಅಸ್ಥಿಮಜ್ಜೆ ಕಸಿ
1 ಹಾಗೆಂದರೇನು?
ಹಾಪ್ಲೊ ಐಡೆಂಟಿಕಲ್ ಕಸಿಯಲ್ಲಿ ಭಾಗಶಃ ಹೊಂದಾಣಿಕೆಯಾಗುವ ದಾನಿಯಿಂದ, ಹೆಚ್ಚಿನ ಬಾರಿ ಹೆತ್ತವರು ಅಥವಾ ಅಣ್ಣತಮ್ಮ/ ಅಕ್ಕತಂಗಿಯಂತಹ ಹತ್ತಿರದ ಸಂಬಂಧಿಯಿಂದ ಪಡೆದ ಆಕರ ಕೋಶಗಳನ್ನು ಕಸಿಗೆ ಉಪಯೋಗಿಸಲಾಗುತ್ತದೆ. ಈ ವಿಧವಾದ ಕಸಿಯಲ್ಲಿ ಅನಾರೋಗ್ಯಯುತವಾದ ರಕ್ತ ಉತ್ಪಾದಕ ಕೋಶಗಳಿಗೆ ಬದಲಾಗಿ ಆರೋಗ್ಯಯುತ ಕೋಶಗಳನ್ನು ಸ್ಥಾಪಿಸಲಾಗುತ್ತದೆ.
2 ದಾನಿಯ ಅರ್ಹತೆ
ಹೆತ್ತವರು ಅಥವಾ ಸಹೋದರ-ಸಹೋದರಿಯರ ಎಚ್‌ಎಲ್‌ಎ ಮಾರ್ಕರ್‌ಗಳು ಶೇ. 50ರಷ್ಟು ಹೊಂದಾಣಿಕೆ ಆಗುವುದರಿಂದ ಅವರೇ ಸಾಮಾನ್ಯವಾಗಿ ಅರ್ಹ ದಾನಿಗಳಾಗಿರುತ್ತಾರೆ.
3 ಹಾಪ್ಲೊ ಐಡೆಂಟಿಕಲ್ ಕಸಿಯ ವಿಧಗಳು
ಟಿ ಸೆಲ್ ರಿಪ್ಲೀಟ್: ದಾನಿಯ ಜೀವಕೋಶಗಳನ್ನು ಮರುಪೂರಣಗೊಳಿಸಿದ ಬಳಿಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸುವುದನ್ನು ತಡೆಯಲು ಹೆಚ್ಚುವರಿ ಕಿಮೊಥೆರಪಿಯನ್ನು ಉಪಯೋಗಿಸಿ ಮಾಡುವ ಕಸಿ.
ಟಿ ಸೆಲ್ ಡಿಪ್ಲೇಶನ್: ಕಸಿಗೆ ಮುನ್ನ ಅನಪೇಕ್ಷಿತ ಟಿ ಸೆಲ್‌ಗಳನ್ನು ನಿವಾರಿಸಿ, ಕಸಿಯ ವಿರುದ್ಧ ಅತಿಥೇಯ ದೇಹ ಕಾರ್ಯಾಚರಿಸುವ ಗ್ರಾಫ್ಟ್ ವರ್ಸಸ್ ಹೋಸ್ಟ್ ಡಿಸೀಸ್ (ಜಿವಿಎಚ್‌ಡಿ) ಕಾಯಿಲೆ ತಲೆದೋರುವ ಅಪಾಯವನ್ನು ಕಡಿಮೆ
4 ಅನುಕೂಲಗಳು ಎಲ್ಲ ತಲಸ್ಸೇಮಿಯಾ ರೋಗಿಗಳ ಕುಟುಂಬದಲ್ಲಿ ಅರೆ ಹೊಂದಾಣಿಕೆ ಆಗುವ ದಾನಿಗಳು ಎಂದಿಗೂ ಲಭ್ಯರಿರುತ್ತಾರೆ.
5 ಅನನುಕೂಲಗಳು ಕಸಿಯನ್ನು ದೇಹವು ತಿರಸ್ಕರಿಸುವ ಅಥವಾ ಕಸಿಯ ವಿರುದ್ಧ ಅತಿಥೇಯ ದೇಹ ಕಾರ್ಯಾಚರಿಸುವ ಗ್ರಾಫ್ಟ್ ವರ್ಸಸ್ ಹೋಸ್ಟ್ ಡಿಸೀಸ್ (ಜಿವಿಎಚ್‌ಡಿ) ಕಾಯಿಲೆಯಂತಹ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಜತೆಗೆ ಪೂರ್ಣ ವಾಗಿ ಹೊಂದಾಣಿಕೆಯಾಗುವ ಕಸಿಗಿಂತ ಇಲ್ಲಿ ಹೆಚ್ಚು ಸಂಕೀರ್ಣವಾದ ಕಸಿ ಕಾರ್ಯವಿಧಾನವನ್ನು ಅನುಸರಿಸ ಬೇಕಾಗುತ್ತದೆಯಲ್ಲದೆ ಇದಕ್ಕೆ ಹೆಚ್ಚು ಕೌಶಲಯುಕ್ತ ಮತ್ತು ಪರಿಣತ ವೈದ್ಯರು-ವೈದ್ಯಕೀಯ ಸಿಬಂದಿಯ ಅಗತ್ಯವಿರುತ್ತದೆ.
6 ಅಪಾಯ ತಗ್ಗಿಸುವ ವಿಧಾನ ಟಿ ಸೆಲ್ ಡಿಪ್ಲೇಶನ್ ಮತ್ತು ಕಸಿಪೂರ್ವ ಚಿಕಿತ್ಸೆ (ಪ್ರಿಟ್ರಾನ್ಸ್‌ಪ್ಲಾಂಟ್ ಇಮ್ಯುನೊ ಸಪ್ರಸಿವ್ ಥೆರಪಿ)ಯಂತಹ ವಿಧಾನಗಳು ಸುರಕ್ಷೆ ಮತ್ತು ಯಶಸ್ಸಿನ ಪ್ರಮಾಣವನ್ನು ಸಾಕಷ್ಟು ಹೆಚ್ಚಿಸಿದ್ದು, ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡಿವೆ.
7 ಯಶಸ್ಸಿನ ಪ್ರಮಾಣ ಹಾಪ್ಲೊ ಐಡೆಂಟಿಕಲ್ ಬಿಎಂಟಿಗಳು ಶೇ. 80-90 ಯಶಸ್ಸಿನ ಪ್ರಮಾಣವನ್ನು ದಾಖಲಿಸಿದ್ದು, ಈ ಮೂಲಕ ತಲಸ್ಸೇಮಿಯಾ ರೋಗಿಗಳಿಗೆ ಒಂದು ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆಯಾಗಿ ಬೆಳೆದಿವೆ.
8 ಭಾರತದಲ್ಲಿ ಅಸ್ಥಿಮಜ್ಜೆ ಕಸಿಯ ವೆಚ್ಚ ಹಾಪ್ಲೊ ಐಡೆಂಟಿಕಲ್ ಅಸ್ಥಿಮಜ್ಜೆ ಕಸಿಗೆ ಟಿ ಸೆಲ್ ರಿಪ್ಲೀಟ್ ಅಥವಾ ಟಿ ಸೆಲ್ ಡಿಪ್ಲೇಟೆಡ್ ಕಸಿಯೇ ಎಂಬುದನ್ನು ಆಧರಿಸಿ ಭಾರತದಲ್ಲಿ ಸರಿಸುಮಾರು 20ರಿಂದ 40 ಲಕ್ಷ ರೂಪಾಯಿಗಳು ತಗಲುತ್ತವೆ.
9 ಕರ್ನಾಟಕದಲ್ಲಿ ಈ ಕಸಿ ಚಿಕಿತ್ಸೆಯ ಲಭ್ಯತೆ ಹಾಪ್ಲೊ ಐಡೆಂಟಿಕಲ್ ಅಸ್ಥಿಮಜ್ಜೆ ಕಸಿ ಚಿಕಿತ್ಸೆಗಳು ಭಾರತದಾತ್ಯಂತ ವಿವಿಧ ವಿಶೇಷಜ್ಞ ಆಸ್ಪತ್ರೆಗಳಲ್ಲಿ ಲಭ್ಯವಿವೆ. ಗಮನಾರ್ಹ ಕೇಂದ್ರಗಳೆಂದರೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳು ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (ಕೆಎಂಸಿ).
10 ಹಣಕಾಸು ನೆರವು ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ, ಅದರಲ್ಲೂ ವಿಶೇಷವಾಗಿ ತಲಸ್ಸೇಮಿಯಾ ಮಕ್ಕಳಿಗೆ ಹಣಕಾಸು ನೆರವು ನೀಡಲು ಹಲವಾರು ಎನ್‌ಜಿಒಗಳು, ಸಿಎಸ್‌ಆರ್ ಉಪಕ್ರಮಗಳು ಮತ್ತು ಕ್ರೌಡ್‌ಫಂಡಿಂಗ್ ವೇದಿಕೆಗಳು ಲಭ್ಯವಿವೆ. ಈ ಮೂಲಕ ಈ ಚಿಕಿತ್ಸೆಯು ಅವರ ಕೈಗೆಟಕುವಂತೆ ಮಾಡಲಾಗುತ್ತದೆ.