Advertisement
ಇದರ ಒಂದು ನ್ಯಾನೋ ಉಪಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವೂ ಇದೆ. ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಅನ್ನು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟದಿಂದ ಯಶಸ್ವಿ ಉಡಾವಣೆ ಮಾಡಲಾಗಿದೆ. ಇದು 2021 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೊದಲ ಉಡಾವಣೆಯಾಗಿದೆ.
PSLVಯ 53ನೇ ಮಿಷನ್ ಯಶಸ್ವಿ ಉಡಾವಣೆ : ಇದು ಪಿ ಎಸ್ ಎಲ್ ವಿ-ಸಿ 51 ಪಿ ಎಸ್ ಎಲ್ ವಿಯ 53 ನೇ ಮಿಷನ್ ಆಗಿದ್ದು, ಈ ರಾಕೆಟ್ ನೊಂದಿಗೆ ಬ್ರೆಜಿಲ್ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಶ್ರೀಹರಿಕೋಟದ, ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಗಿದೆ.
Related Articles
Advertisement
ಇದನ್ನು ‘ಪ್ರಧಾನಿ ಆತ್ಮನಿರ್ಭರ್ ಭಾರತ್ ಉಪಕ್ರಮ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ಒಗ್ಗಟ್ಟು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ ‘ ಎಂದು ಎಸ್ ಕೆ ಐ ಹೇಳಿದೆ.
ಈ ಮಿಷನ್ ಮೂಲಕ ಎಸ್ ಕೆ ಐ ಡಿಜಿಟಲ್ ಭಗವದ್ಗೀತೆಯನ್ನು ಎಸ್ ಡಿ ಕಾರ್ಡ್‌ನಲ್ಲಿ ಹಾಕಿ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಹಾಗೆಯೇ ಈ ಉಪಗ್ರಹವು 25 ಸಾವಿರ ಭಾರತೀಯ ಜನರ ಹೆಸರುಗಳನ್ನು ಕೂಡ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ.
ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಪಿ ಎಸ್ ಎಲ್ ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಸಿ 51 / ಅಮೆಜೋನಿಯಾ -1 ಯು ಎಸ್ ನಲ್ಲಿ ಸಿಯಾಟಲ್ ನ ಸ್ಯಾಟಲೈಟ್ ರೈಡ್ ಶೇರ್ ಮತ್ತು ಮಿಷನ್ ಮ್ಯಾನೇಜ್ ಮೆಂಟ್ ಪ್ರೊವೈಡರ್ ಸ್ಪೇಸ್ ಪ್ಲೈಟ್ ಇಂಕ್ ನ ವಾಣಿಜ್ಯ ನಿರ್ವಹಣೆಯಡಿಯಲ್ಲಿ ಪ್ರಾರಂಭಿಸಲಾಗುವ ಎನ್ ಎಸ್ ಐ ಎಲ್ ನ ಮೊದಲ ಮೀಸಲಾದ ಕಮರ್ಷಿಯಲ್ ಮಿಷನ್ ಇದಾಗಿದೆ.
ಬ್ರೆಜಿಲ್‌ನಲ್ಲಿ ನಿರ್ಮಿಸಲಾದ ಮೊದಲ ಉಪಗ್ರಹವನ್ನು ಉಡಾಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಎನ್ ಎಸ್ ಐ ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ ನಾರಾಯಣ್ ಹೇಳಿದ್ದಾರೆ.
ಇನ್ನು, 637 ಕೆಜಿ ತೂಕದ ಅಮೆಜೋನಿಯಾ -1 ಭಾರತದಿಂದ ಉಡಾಯಿಸಲ್ಪಡುವ ಬ್ರೆಜಿಲ್ ನ ಮೊದಲ ಉಪಗ್ರಹವಾಗಿದೆ. ಇದು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (INPI) ಆಪ್ಟಿಕಲ್ ಭೂ ವೀಕ್ಷಣಾ ಉಪಗ್ರಹವಾಗಿದೆ. ಅಮೆಜೋನಿಯಾ -1 ಮೂಲಕ ಅಮೆಜಾನ್ ಪ್ರದೇಶದಲ್ಲಿನ ಅರಣ್ಯನಾಶದ ಮೇಲ್ವಿಚಾರಣೆ ಮತ್ತು ಬ್ರೆಜಿಲ್ ಭಾಗದ ವೈವಿಧ್ಯಮಯ ಕೃಷಿಯ ವಿಶ್ಲೇಷಣೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹವು ಬಳಕೆದಾರರಿಗೆ ರಿಮೋಟ್ ಸೆನ್ಸಿಂಗ್ ಡೇಟಾ ಒದಗಿಸಲಿದೆ ಎಂದು ಇಸ್ರೋ ಹೇಳಿಕೆ ನೀಡಿದೆ.