Advertisement

ಪಿಎಸ್‌ಐ ಅಕ್ರಮ; ತನಿಖೆಗೆ ಒತ್ತಾಯ

03:32 PM Jul 14, 2022 | Team Udayavani |

ಧಾರವಾಡ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಪಿಜಿಗಿಂತ ಉನ್ನತ ಮಟ್ಟದವರು ಶಾಮೀಲು ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಹಿಂದಿನ ಸಿದ್ದರಾಮಯ್ಯ ಅವಧಿ ಸೇರಿದಂತೆ 2016ರಿಂದ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ಜು.31ರೊಳಗೆ 545 ಪಿಎಸ್‌ಐ ಅಭ್ಯರ್ಥಿಗಳ ಮರು ಪರೀಕ್ಷೆ ದಿನಾಂಕ ಪ್ರಕಟಿಸಿ ಹಾಗೂ 420 ಹೊಸ ಅಭ್ಯರ್ಥಿಗಳ ಪರೀಕ್ಷೆ ನಡೆಸಬೇಕು. ಎಫ್‌ಡಿಎ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ತನಿಖೆಗೊಳಪಡಿಸಬೇಕು. ಪೊಲೀಸರ ನೇಮಕಾತಿ ವಯೋಮಿತಿಯನ್ನು ಜಮ್ಮು ಕಾಶ್ಮೀರ, ಕೇರಳ ಮಾದರಿಯಲ್ಲಿ 33ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಲಾಯಿತು.

ಜನಪ್ರತಿನಿಧಿಗಳಿಗೆ ಲಕ್ಷಾಂತರ ಯುವಕರ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದರೆ ಭ್ರಷ್ಟಾಚಾರ ಮುಕ್ತ ಪಾರದರ್ಶಕ ನೇಮಕಾತಿ ಮಾಡುವ ಮೂಲಕ ತಮ್ಮ ನೈತಿಕತೆ ಪ್ರದರ್ಶನ ಮಾಡಲು ಮುಂದಾಗಲಿ ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಲಾಯಿತು.

ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ರಾಘವೇಂದ್ರ ಶೆಟ್ಟಿ, ಸುರೇಶ ಕೆ. ಶಿವಕುಮಾರ್‌ ದೊಡಮನಿ, ರವಿಶಂಕರ್‌ ಮಾಲಿಪಾಟೀಲ್‌, ಶರಣು ಬಾಗೂರ, ಬಸವರಾಜ ಪೊತದೊಡ್ಡಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next