Advertisement

ಪಿಎಸ್ಐ ಪರೀಕ್ಷೆ ಅಕ್ರಮ : ಧಾರವಾಡ ದಲ್ಲಿ ಮತ್ತೋರ್ವನ ಬಂಧನ

09:12 PM Oct 14, 2022 | Team Udayavani |

ಧಾರವಾಡ : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಪರೀಕ್ಷೆ ಬರೆದ ಅಭ್ಯರ್ಥಿ ಶ್ರೀಮಂತ ಸಾತಾಪುರ ಎಂಬಾತನನ್ನು ಪೊಲೀಸರು ಬಂಧಿಸಿ, ಅ.17 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Advertisement

ಧಾರವಾಡ ಸೇಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ ಪರೀಕ್ಷೆ ಬರೆದಿದ್ದ ವಿಜಯಪುರ ಜಿಲ್ಲೆ ಇಂಡಿಯ ಶ್ರೀಮಂತ ಬ್ಲೂಟೂತ್ ಬಳಸಿ  ಪರೀಕ್ಷೆಯಲ್ಲಿ95 ನೇ ರ್‍ಯಾಂಕ್ ಬಂದಿರುವ ಬಗ್ಗೆ ಸಿಐಡಿ ತನಿಖೆಯಿಂದ ತಿಳಿದು ಬಂದಿತ್ತು. ಮೊಬೈಲ್ ಕರೆ ಮಾಹಿತಿ ಮೇಲೆ ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು ಮೊಬೈಲ್ ಗೆ ಕರೆ ಮಾಡಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಎಂಬುದು ಖಚಿತವಾಗಿತ್ತು. ಆದ್ದರಿಂದ ಈ ಕುರಿತು ಉಪನಗರ ಠಾಣೆಯಲ್ಲಿ ಸಿಐಡಿಯಿಂದ ಪ್ರಕರಣ ದಾಖಲು ಆಗಿದ್ದು, ಧಾರವಾಡದ 2ನೇ ಪ್ರಧಾನ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಅ.17ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಆರೋಪಿ ಸದ್ಯ ಧಾರವಾಡ ಕೇಂದ್ರ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ. ಪಿಎಸ್‌ಐ ಲಿಖಿತ ಪರೀಕ್ಷೆಯಲ್ಲಿ ಈತ 95ನೇ ರ್‍ಯಾಂಕ್ ಪಡೆದಿದ್ದು, ಅಕ್ರಮವಾಗಿ ಪರೀಕ್ಷೆ ಬರೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಥಮ ಪರೀಕ್ಷೆಯಲ್ಲಿ ಒಂದು ಮೊಬಲ್ ನಂಬರ್ ಬಳಕೆ ಮಾಡಿ ಪರೀಕ್ಷೆ ಎದುರಿಸಿದ್ದರೆ, ಪ್ರಶ್ನೆ ಪತ್ರಿಕೆ 2ರಲ್ಲಿಯೂ ಬೇರೆ ನಂಬರ್ ಬಳಕೆ ಮಾಡಿ ಪರೀಕ್ಷೆ ಬರೆದಿರುವುದು ಕಾಲ್ ಡಿಟೇಲ್ ಮೂಲಕ ಬೆಳಕಿಗೆ ಬಂದಿದೆ. ಪಿಎಸ್‌ಐ ಲಿಖಿತ ಪರೀಕ್ಷೆ ನಡೆದ ಸಂದರ್ಭದಲ್ಲಿ ಶ್ರೀಮಂತ ವಿವಿಧ ಫೋನ್ ನಂಬರ್‌ಗಳ ಮೂಲಕ ನಿರಂತರವಾಗಿ ಕರೆಗಳನ್ನು ಸ್ವೀಕರಿಸಿರುವ ಕುರಿತು ಟವರ್ ಲೊಕೇಶನ್ ಪರಿಶೀಲಿಸಿದಾಗ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದೆ.

ಪ್ರತಿಯೊಂದು ಫೋನ್ ನಂಬರ್‌ಗಳನ್ನು ತಪಾಸಣೆ ಮಾಡುತ್ತ ಸಾಗಿದಾಗ ಎಲ್ಲ ಫೋನ್ ನೆಟ್‌ವರ್ಕ್ ಗಳು ಒಂದೇ ಟವರ್‌ನಲ್ಲಿ ಸಿಕ್ಕಿದ್ದು, ಅದು ಶ್ರೀಮಂತ ಪರೀಕ್ಷೆ ಬರೆದ ಟವರ್‌ ಲೊಕೇಶನ್‌ಗಳದ್ದೇ ಆಗಿದೆ. ಅಕ್ರಮ ನಡೆದಿರುವ ಕುರಿತು ಸಿಐಡಿ ಡಿಟೆಕ್ಟಿವ್ ಸಬ್ ಇನ್ಸಪೆಕ್ಟರ್ ಚಂದ್ರಹಾಸ ಟಿ.ಎನ್. ಅವರ ದೂರಿನ ಮೇಗೆ ಶ್ರೀಮಂತ ಸೇರಿದಂತೆ ಈತನಿಗೆ ಅಕ್ರಮ ಮಾಡಲು ಸಹಾಯ ಮಾಡಿದ ಎಲ್ಲರನ್ನು ಬಂಧಿಸಲಾಗಿದ್ದು, ಈ ವ್ಯಕ್ತಿಗಳ ಮೇಲೆ ವಿವಿಧ ಕಲಂಗಳನ್ನು ಹಾಕಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next