Advertisement
ಮಂಗಳವಾರ ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್‌ಐ 545 ಹುದ್ದೆಗಳಿಗಾಗಿ 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು. ಪರೀಕ್ಷೆಯಲ್ಲಿ ನಕಲು ಮಾಡಿರುವುದು ಸೇರಿ ಯಾವುದೇ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಲೋಹ ಶೋಧಕ ಯಂತ್ರದ ಮೂಲಕ ಪ್ರತಿ ಅಭ್ಯರ್ಥಿಯನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಕೆಲವು ಅಭ್ಯರ್ಥಿಗಳ ಕೈಯಲ್ಲಿದ್ದ ಮೊಬೈಲ್ ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರದಂತೆ ನಿರ್ಬಂಧಿಸಲಾಯಿತು. ಪ್ರತೀ ಪರೀಕ್ಷಾ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಲು ಗದಗದಿಂದ ಬೆಂಗಳೂರಿಗೆ ಆಗಮಿಸಿದ್ದ ಅಭ್ಯರ್ಥಿಯೊಬ್ಬ ಧರಿಸಿದ್ದ ಕೈ ಖಡಗ ತೆಗೆಸಲು ಪರೀಕ್ಷಾ ಕೇಂದ್ರದ ಸಿಬಂದಿ ಹರಸಾಹಸ ಪಟ್ಟರೂ ಅದು ಕೈಯಿಂದ ಬರಲಿಲ್ಲ. ಇತ್ತ ಎರಡು ವರ್ಷದ ಹಿಂದೆ ಕೈಗೆ ಹಾಕಿದ್ದ ಖಡಗ ತೆಗೆಯಲು ಅಭ್ಯರ್ಥಿಯೂ ಸಾಕಷ್ಟು ಪ್ರಯತ್ನಿಸಿದ್ದ. ಅನಂತರ ಶಾಂಪೂ ಬಳಸಿ ಕಡಗ ತೆಗೆಯಲಾಯಿತು. ಈ ವೇಳೆ ಆತನ ಕೈಗೆ ತರಚಿದ ಗಾಯವಾಯಿತು. ಚಿನ್ನಾಭರಣ ತೆಗೆದಿಟ್ಟ ಮಹಿಳೆಯರು
ಕೆಲವು ಮಹಿಳಾ ಅಭ್ಯರ್ಥಿಗಳ ಮೈ ತುಂಬಾ ಧರಿಸಿದ್ದ ಚಿನ್ನಾಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರೆ, ಮತ್ತೆ ಕೆಲವು ಮಹಿಳೆಯರು ಚಿನ್ನಾಭರಣ ಕಳಚಲು ಆಕ್ಷೇಪಣೆ ಸಲ್ಲಿಸಿದರು. ಕೊನೆಗೆ ಅಧಿಕಾರಿಗಳ ಮಾತಿಗೆ ಸಮ್ಮತಿಸಿ ಪರೀಕ್ಷೆ ಬರೆಯಬೇಕಾಯಿತು. ಈ ಪೈಕಿ ಕೆಲವು ಮಹಿಳೆಯರು ಆಕ್ರೋಶಗೊಂಡು ಪರೀಕ್ಷೆ ಬರೆಯದೆ ವಾಪಸ್ ಹೋದ ಘಟನೆಯೂ ನಡೆದಿದೆ.
Related Articles
ಜೀನ್ಸ್ ಪ್ಯಾಂಟ್ ಧರಿಸಿ ಬಂದ ಪರೀಕ್ಷಾರ್ಥಿ ಗಳನ್ನು ಪೊಲೀಸ್ ಸಿಬಂದಿ ವಾಪಸ್ ಕಳುಹಿಸಿ ರುವ ಘಟನೆಯೂ ನಡೆಯಿತು. ಈ ಪೈಕಿ ಕೆಲವು ಅಭ್ಯರ್ಥಿಗಳು ಪ್ಯಾಂಟ್ ಬದಲಾಯಿಸಿಕೊಂಡು ಬಂದು ಪರೀಕ್ಷೆ ಬರೆದರೆ, ಇನ್ನು ಕೆಲವರು ಹಿಡಿ ಶಾಪ ಹಾಕಿ ಮನೆಗೆ ಮರಳಿದರು.
Advertisement
ಉದ್ದ ತೋಳಿನ ಅಂಗಿಗೆ ಕತ್ತರಿಪರೀಕ್ಷಾ ಪ್ರಾಧಿಕಾರವು ಕಡ್ಡಾಯ ವಸ್ತ್ರ ಸಂಹಿತೆ ಸೇರಿದಂತೆ ಇನ್ನಿತರ ನಿಯಮ ವಿಧಿಸಿತ್ತು. ಆದರೆ, ಕೆಲವು ಪರೀಕ್ಷಾರ್ಥಿಗಳು ಇದನ್ನು ಉಲ್ಲಂ ಸಿದ್ದರು. ನಗರದ ಸೆಂಟ್ ಜೋಸೆಫ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಫುಲ್ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಯೊಬ್ಬ ಶರ್ಟ್ ತೋಳು ಕತ್ತರಿಸುವುದಾದರೆ ಪರೀಕ್ಷೆ ಬರೆಯದೆ ಹೊರಡುತ್ತೇನೆ ಎಂದು ಭದ್ರತ ಸಿಬಂದಿ ಜತೆಗೆ ಹಠ ಹಿಡಿದ ಪ್ರಸಂಗ ನಡೆಯಿತು. ಪರೀಕ್ಷಾ ಕೇಂದ್ರದ ಸಿಬಂದಿ ಜಗ್ಗದಿದ್ದಾಗ ಶರ್ಟ್ ತೋಳು ಕತ್ತರಿಸಲು ಸಮ್ಮತಿಸಿ ಪರೀಕ್ಷೆಗೆ ಹಾಜರಾಗಿ¨ªಾನೆ.