Advertisement

ದಾನಿಗಳ ನೆರವಿನೊಂದಿಗೆ ಪ್ರತಿದಿನ ನೀರು ಒದಗಿಸುತ್ತಿರುವ ಗ್ರಾ.ಪಂ.

10:21 PM May 21, 2020 | Sriram |

ವಂಡ್ಸೆ: ವಂಡ್ಸೆ ಗ್ರಾ.ಪಂ. ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಗ್ರಾಮಸ್ಥರಿಗೆ ಕಳೆದ 10 ದಿನಗಳಿಂದ ಉಚಿತವಾಗಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. 1 ದಿನಕ್ಕೆ 42,000 ಲೀ. ನೀರು ಸರಬರಾಜು ಇಲ್ಲಿನ ತುರ್ತು ಅಗತ್ಯತೆ ಇರುವ ವಂಡ್ಸೆ ಪೇಟೆ, ಮೂಕಾಂಬಿಕಾ ಕಾಲನಿ, ಉದ್ದಿನಬೆಟ್ಟು, ಆತ್ರಾಡಿ, ಕಲ್ಮಾಡಿ, ಬಳಿಗೇರಿ, ತೆಂಕೊಡ್ಗಿ, ಅಬ್ಬಿ, ಹರವರಿ ಮುಂತಾದೆಡೆ ಪ್ರತಿದಿನ ಪ್ರತಿ ಮನೆಗೆ 200 ಲೀ. ನೀರು ಒದಗಿಸಲಾಗುತ್ತಿದೆ.

Advertisement

ಗ್ರಾಮ ಸಭೆಯಲ್ಲಿ ತೀರ್ಮಾನ
ಮೇ 12ರಂದು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಜನರ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಉಚಿತ ನೀರು ಸರಬರಾಜು ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ದಾನಿಗಳ ಸಹಕಾರದಿಂದ ಎದುರಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಇನ್ನು ಒದಗದ ಸರಕಾರದ ಸವಲತ್ತು
ಸರಕಾರದ ಆದೇಶದಂತೆ ತಹಶೀಲ್ದಾರರ ನೇತೃತ್ವದಲ್ಲಿ ಗುತ್ತಿಗೆ ಆಧಾರ ಮೇಲೆ ನೀರು ಸರಬರಾಜು ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ‌ ಲೀಟರ್‌ ಮೇಲಿನ ಸರಕಾರದ ದರವು ಗುತ್ತಿಗೆದಾರರಿಗೆ ನಿಭಾಯಿಸುವುದು ಕಷ್ಟ ಸಾಧ್ಯವಾಗಿರುವುದರಿಂದ ಈವರೆಗೆ ಯಾರೂ ಟೆಂಡರ್‌ ಪಡೆಯಲು ಮುಂದೆ ಬಂದಿಲ್ಲಾ ಹಾಗಾಗಿ ಆ ಯೋಜನೆ ಈವರೆಗೆ ಅನುಷ್ಟಾನ ಗೊಂಡಿಲ್ಲ.

ಬತ್ತಿದ ಬಾವಿ
ಇಲ್ಲಿನ 55 ಮನೆಗಳಲ್ಲಿ ಬಾವಿ ನೀರು ಸಂಪೂರ್ಣ ಬತ್ತಿಹೊಗಿದೆ. ನಲ್ಲಿ ನೀರು ಸಂಪರ್ಕ ಒದಗಿಸಿಲ್ಲ ಹಾಗೆಯೇ 145ನಲ್ಲಿ ಸಂಪರ್ಕವಿದ್ದು, ನೀರು ಬತ್ತಿ ಹೋಗಿರುವುದು ಇನ್ನಷ್ಟು ಸಮಸ್ಯೆಗೆ ಎಡೆಮಾಡಿದೆ. ಈ ಎಲ್ಲ ಸಮಸ್ಯೆಗಳ ನಡುವೆ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅಭಾವವಾಗದಿರಲು ಸರಕಾರದ ಮುಂದಿನ ನೀರಿನ ವ್ಯವಸ್ಥೆ ವರೆಗೆ ನೀರು ಒದಗಿಸಲಾಗುತ್ತಿದೆ.

ಗ್ರಾಮದಲ್ಲಿ ಬತ್ತಿದ ಬಾವಿ
ಈ ಬಾರಿ ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಎಪ್ರಿಲ್‌ ತಿಂಗಳಲ್ಲಿ ಬಾವಿಗಳು ಬತ್ತಿ ಹೋಗಿದೆ ಸರಕಾರದಿಂದ ನೀರು ಒದಗಿಸುವಲ್ಲಿ ವಿಳಂಬವಾಗುತ್ತಿದೆ . ಈ ದಿಸೆಯಲ್ಲಿ ದಾನಿಗಳ ನೆರವಿನೊಂದಿಗೆ ದಿನಂಪ್ರತಿ ಗ್ರಾಮಸ್ಥರಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ.
– ಉದಯ ಕುಮಾರ್‌ ಶೆಟ್ಟಿ,ಅಧ್ಯಕ್ಷ ಗ್ರಾ.ಪಂ.ವಂಡ್ಸೆ

Advertisement
Advertisement

Udayavani is now on Telegram. Click here to join our channel and stay updated with the latest news.

Next