ಹೌದು, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ “ಇಪಿಎಫ್ಒ 3.0′ ಎಂಬ ಯೋಜನೆ ಜಾರಿ ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
Advertisement
ಪ್ರಸ್ತುತ ಭವಿಷ್ಯ ನಿಧಿ ಖಾತೆಯಿಂದ ಮೊತ್ತವನ್ನು ಉದ್ಯೋಗಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲು 7 ರಿಂದ 10 ದಿನಗಳು ಬೇಕಾಗುತ್ತವೆ. ಹೀಗಾಗಿ ಎಟಿಎಂ ಮೂಲಕವೇ ಅದನ್ನು ಪಡೆಯುವ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಚಿಂತನೆ ನಡೆಸಿದೆ. ಇದಕ್ಕಾಗಿ ಸಾಮಾನ್ಯ ಡೆಬಿಟ್ ಕಾರ್ಡ್‌ಗಳಂತೆಯೇ ಕಾರ್ಯನಿರ್ವಹಿಸುವ ಎಟಿಎಂ ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದು ಮುಂದಿನ ವರ್ಷದ ಎಪ್ರಿಲ್-ಮೇ ಯಿಂದ ಜಾರಿಯಾಗುವ ನಿರೀಕ್ಷೆ ಇದೆ.
ಪ್ರಸ್ತುತ ಉದ್ಯೋಗಿಗಳು ಭವಿಷ್ಯ ನಿಧಿಗೆ ತಮ್ಮ ವೇತನದ ಶೇ.12 ಪ್ರಮಾಣವನ್ನು ನೀಡಬೇಕಾಗಿದೆ. ಆದರೆ ಪ್ರಸ್ತಾವಿತ ನೀತಿಯ ಅನ್ವಯ ಶೇ.12ರ ಮಿತಿಯನ್ನು ತೆಗೆದುಹಾಕಿ, ಉದ್ಯೋಗಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಹೆಚ್ಚಿನ ಮೊತ್ತವನ್ನು ಪಿಎಫ್ಗೆ ಹಾಕಬಹುದಾಗಿದೆ. ಆದರೆ, ಉದ್ಯೋಗದಾತರು ಅಂದರೆ ಕಂಪೆನಿಗಳ ಕೊಡುಗೆ ಪ್ರಮಾಣ ಈಗಿರುವಷ್ಟೇ(ಶೇ.12) ಮುಂದುವರಿಯಲಿದೆ. ಉದ್ಯೋಗಿಗಳು ನೀಡುವ ಕೊಡುಗೆ ಮಿತಿಯನ್ನು ತಮ್ಮ ಆರಂಭಿಕ ವೇತನದ ಶೇ.100ರವರೆಗೆ ನೀಡುವ ಅವಕಾಶವನ್ನು ಸರಕಾರ ಕಲ್ಪಿಸಿ ಕೊಡಲಿದೆ ಎಂದು ಹೇಳಲಾಗಿದೆ.