Advertisement

ಕೋವಿಡ್‌ ತಡೆಗೆ ಮುಂಜಾಗ್ರತೆ ಪಾಲಿಸಿ

06:14 AM Jun 29, 2020 | Lakshmi GovindaRaj |

ಚಾಮರಾಜನಗರ: ಮುಂಬರುವ 10 ದಿನಗಳಲ್ಲಿ ಕೋವಿಡ್‌-19 ವೈರಸ್‌ ತೀವ್ರವಾಗಿ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಅತ್ಯಂತ ಸಂಯಮ ಮತ್ತು ಜವಾಬ್ದಾರಿಯಿಂದ ವರ್ತಿಸಿ ಜಿಲ್ಲಾ ಡಳಿತ ನೀಡುವ  ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿ ಸುವ ಮೂಲಕ ಜಿಲ್ಲೆಯನ್ನು ಸುರಕ್ಷಿತವಾಗಿಡಲು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮನವಿ ಮಾಡಿದರು.

Advertisement

ಲಾಕ್‌ಡೌನ್‌ ಸಂದರ್ಭದಲ್ಲಿ ಜಿಲ್ಲೆಯ ಜನತೆ ತೋರಿದ ಪ್ರಬುದ ವರ್ತನೆ ಈಗ  ಅತ್ಯಗತ್ಯವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜನರು ಅತ್ಯಂತ ಎಚ್ಚರಿಕೆ ಹಾಗೂ ಜಾಗರೂಕತಾ ಕ್ರಮಗಳಿಗೆ ತುರ್ತಾಗಿ ಗಮನ ನೀಡಬೇಕಿದೆ. ಅನವಶ್ಯಕವಾಗಿ ಸ್ನೇಹಿತರ, ಹಿತೈಷಿಗಳು ಹಾಗೂ ಹತ್ತಿರದ ಸಂಬಂಧಿಗಳನ್ನು ಭೇಟಿ ಮಾಡದಿರುವುದು ಒಳಿತು ಎಂದು ತಿಳಿಸಿದ್ದಾರೆ.

ಅನಗತ್ಯ ಪ್ರಯಾಣಿಸಬೇಡಿ: ಗ್ರಾಮಗಳಿಂದ ಅನಗತ್ಯ ವಾಗಿ ನಗರ, ಪಟ್ಟಣ, ಪ್ರದೇಶಗಳಿಗೆ ಹೋಗಬಾರದು, ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಊರುಗಳಿಗೂ ಪ್ರಯಾಣ ಮಾಡುವುದು ಸುರಕ್ಷಿತವಲ್ಲ. ಅಂತಾರಾಜ್ಯ ಪ್ರಯಾಣ ಕೈಗೊಳ್ಳದೇ  ಇರುವುದು ಅತ್ಯಂತ ಕ್ಷೇಮ. ಮನೆಗಳಲ್ಲಿ ಶುಭ ಕಾರ್ಯಗಳನ್ನು ಸದ್ಯಕ್ಕೆ ಮುಂದೂ ಡುವುದು ಒಳ್ಳೆಯದ ಎಂದು ಹೇಳಿದ್ದಾರೆ.

ಮಾಸ್ಕ್ ಕಡ್ಡಾಯ: ಕಾಪಾಡಿಕೊಳ್ಳುವ ಮಹತ್ತರ ಉದ್ದೇಶ ದಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸಾಬೂನು, ಸ್ಯಾನಿಟೈಸರ್‌ ಬಳಸಿ ಕೈತೊಳೆದುಕೊಳ್ಳುವುದನ್ನು ಮರೆಯಬಾರದು.  ಮನೆಗಳಲ್ಲಿಯೇ ಇದ್ದು ಸುರಕ್ಷಿತವಾಗಿರಬೇಕು. ಸುರ ಕ್ಷತೆ ಎಂಬುದು ವೈಯಕ್ತಿಕವಾಗಿ ಮಾತ್ರವಲ್ಲ ನಿಮ್ಮೆಲ್ಲರ ಪ್ರೀತಿಪಾತ್ರರ ಸುರಕ್ಷತೆಗೂ ಎಂಬುದನ್ನು ಮನಗಾಣಬೇಕು ಎಂದು ಜಿಲ್ಲಾಧಿಕಾರಿ ಆರ್‌. ರವಿ ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸಹಕರಿಸಿ: ಜೀವ ಉಳಿಯಬೇಕು, ಜೀವನವೂ ನಡೆಯ ಬೇಕು, ಪ್ರಸ್ತುತ ಎದುರಾಗುತ್ತಿರುವ ಸಂಕಷ್ಟ ಸಮಯದಲ್ಲಿ ಜಿಲ್ಲೆಯ ಜನರು ಅತ್ಯಂತ ಜಾಗ್ರತೆ ಯಿಂದ ವರ್ತಿಸಬೇಕು. ಈ ಮೂಲಕ ಇತರರಿಗೂ ಮಾದರಿಯಾಗಬೇಕು.  ಕೋವಿಡ್‌ 19 ತಡೆಯಲು ಸಮಸ್ತ ಜನತೆ ಜಿಲ್ಲಾಡಳಿತ ನೀಡುವ ಪ್ರತಿ ಯೊಂದು ಸೂಚನೆ, ಸಲಹೆಯನ್ನು ಚಾಚು ತಪ್ಪದೇ  ಪಾಲಿಸುವ ಮೂಲಕ ಜೊತೆಗಿದ್ದು ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ. ಆರ್‌.ರವಿ  ಪ್ರಕಟಣೆಯಲ್ಲಿ ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next