Advertisement

Education: ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿ ಒದಗಿಸಿ: ಕೇಂದ್ರ

12:55 AM Jan 20, 2024 | Team Udayavani |

ಹೊಸದಿಲ್ಲಿ: ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಕೋರ್ಸ್‌ ಗಳಿಗೆ ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವಂತೆ ಎಲ್ಲ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರಕಾರ ನಿರ್ದೇಶಿಸಿದೆ.

Advertisement

ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ನಡೆ ಸಲು ಅವಕಾಶ ಒದಗಿಸುವ ಗುರಿಯನ್ನು ಈ ಕ್ರಮ ಹೊಂದಿದೆ.

ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಕೋರ್ಸ್‌ಗಳ ಅಧ್ಯಯನ ಸಾಮಗ್ರಿಯು ಭಾರತೀಯ ಭಾಷೆಗಳಲ್ಲಿ ದೊರಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಯುಜಿಸಿ, ಎಐಸಿಟಿಇ, ಎನ್‌ಸಿ ಇಆರ್‌ಟಿ, ಎನ್‌ಐಒಎಸ್‌, ಐಜಿಎನ್‌ಒಯು, ಐಐಟಿ, ಸಿಯು, ಎನ್‌ಐಟಿ, ವಿಶ್ವವಿದ್ಯಾನಿಲಯಗಳು ಹಾಗೂ ರಾಜ್ಯಗಳ ಶಿಕ್ಷಣ ಇಲಾಖೆಗಳಿಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ.

ಪ್ರತೀ ಹಂತದ ಶಿಕ್ಷಣದಲ್ಲೂ ಬಹುಭಾಷಾವಾದವನ್ನು ಉತ್ತೇಜಿಸಲು 2020ರ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಶಿಫಾರಸುಗಳ ಅನುಸಾರವಾಗಿ ಈ ನಿರ್ದೇಶನವನ್ನು ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಸ್ವಂತ ಭಾಷೆಯಲ್ಲಿ ಅಧ್ಯಯನ ಮಾಡಲು ಅವಕಾಶ ಪಡೆಯುತ್ತಾರೆ. ಅಲ್ಲದೇ ಇದರಿಂದ ಉತ್ತಮ ಕಲಿಕೆಯ ಫ‌ಲಿತಾಂಶಗಳನ್ನು ಹೊಂದಬಹುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next