Advertisement
ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಾದಾಮಿ ತಾಲೂಕುಗೋವಿನಕೊಪ್ಪ ಕಲಾ ತಂಡದ ಮಂಜುನಾಥ ದ್ಯಾವನ್ನವರ ಮಾತನಾಡಿ, ರಾಜ್ಯದಲ್ಲಿ ಸುಮಾರು 4500ಕ್ಕೂ ಹೆಚ್ಚು ಬೀದಿ ನಾಟಕಕಲಾವಿದರಿದ್ದೇವೆ. ಸರ್ಕಾರದ ವಿವಿಧ ಯೋಜನೆಗಳ ಕುರಿತು ಗ್ರಾಮೀಣ ಜನರಲ್ಲಿ ನಾಟಕದ ಮೂಲಕ ಜಾಗೃತಿ ಮೂಡಿಸಿ,ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದೇವೆ. ಆದರೆ, ಈಚಿನ ದಿನಗಳಲ್ಲಿ ಬೀದಿ ನಾಟಕಕಲಾವಿದರಿಗೆ ಯಾವುದೇ ಐಇಸಿ ಚಟುವಟಿಕೆ ನೀಡಿಲ್ಲ. ಇದರಿಂದ ಕಲಾವಿದರ ಬದುಕು ದುಸ್ತರವಾಗಿದೆ ಎಂದರು.
Related Articles
Advertisement
ಶಿಕಣ ಇಲಾಖೆ ಅಧಿಕಾರಿಗಳ ಭೇಟಿ : ಶಿರೂರ: ಸ್ಥಳೀಯ ಸಿದ್ದೇಶ್ವರ ಪ್ರೌಢಶಾಲೆಯಿಂದ ವಿದ್ಯಾರ್ಥಿಗಳ ಶಿಕ್ಷಣದ ಉನ್ನತಿಗಾಗಿ ಗ್ರಾಮದ ಎಂಟು ಕಡೆ ನಡೆಯುತ್ತಿರುವ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಾರ್ಯಾಲಯದ ವಿಷಯ ಪರಿವೀಕ್ಷಕರಾದ ಎಂ.ಎ ಬಾಳಿಕಾಯಿ, ಎನ್.ವೈ. ಮಾಡಮಗೇರಿ ಭೇಟಿ ನೀಡಿ ಪರಿಶಿಲಿಸಿದರು.
ನಂತರ ವಿದ್ಯಾರ್ಥಿಗಳನ್ನು ವಿವಿಧ ವಿಷಯಗಳ ಕುರಿತು ಪ್ರಶ್ನಿಸಿ ಅವರಿಂದ ಉತ್ತರಪಡೆದರು. ತಾಲೂಕಿನ ಪ್ರತಿ ಶಾಲೆಗಳಲ್ಲಿ ಮುಖ್ಯ ಗುರುಗಳು ಆಯಾ ಸಹ ಶಿಕ್ಷಕರು, ಈ ವಿದ್ಯಾಗಮದ ಯೋಜನೆಯನ್ನು ಉತ್ತಮರೀತಿಯಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಗ್ರಾಮದ ಕಿತ್ತೂರು ಚೆನ್ನಮ್ಮ ಪ್ರೌಢಶಾಲೆಯವತಿಯಿಂದ ಶಿರೂರ, ಬೂದಿನಗಡ, ಗುಂಡನಪಲ್ಲೆ, ಮಲ್ಲಾಪುರ ಗ್ರಾಮಗಳಲ್ಲಿ 4 ಕಲಿಕಾ ತಂಡಗಳು ವಿಷಯವಾರು ಬೋಧನೆ ನಡೆಯುತ್ತಿದೆ. ಸಿದ್ದೇಶ್ವರ ಪ್ರೌಢಶಾಲೆಯಮುಖ್ಯ ಗುರುಮಾತೆ, ಎಲ್.ಟಿ. ಪೂಜಾರ ಸೇರಿದಂತೆ 8 ಶಿಕ್ಷಕರು ಕಿತ್ತೂರು ಚನ್ನಮ್ಮ ಪ್ರೌಢಶಾಲೆಯ ಮುಖ್ಯ ಗುರುಮಾತೆ ವಿಜಯಲಕ್ಷ್ಮೀ ಹಿರೇಮಠ ಸೇರಿದಂತೆ ವಿದ್ಯಾಗಮ ಕೇಂದ್ರಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಪಾಠ ಮಾಡುತ್ತಿದ್ದಾರೆ.
ಗ್ರಾಮ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಹೆಣ್ಣು ಮಕ್ಕಳ ಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯಗುರುಗಳಾದ ಎಚ್.ಕೆ. ಮಗಸಜ್ಜಿ, ಆರ್.ಎಚ್ ಬೇವಿನಗಿಡದ, ಎಚ್.ಎಂಮಾಚಾ, ವೈ.ಎಂ. ಮಲಘಾಣ, ಎಸ್. ಎಂ. ನಾಲವತ್ವಾಡ ಸೇರಿದಂತೆ ಸಹಶಿಕ್ಷಕರುನಡೆಸುತ್ತಿರುವ ಗ್ರಾಮದ 50 ಕ್ಕೂ ಹೆಚ್ಚು ಕಲಿಕಾ ತಂಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.