ಅರಸೀಕೆರೆ: ಶಾಸಕರ ಮನವಿಗೆ ಸ್ಪಂದಿಸಿ ರೈತರು 552 ಎಕರೆ ಭೂಮಿಯನ್ನು ರೈತರು ಎತ್ತಿನ ಹೊಳೆ ಯೋಜನಾ ಕಾಮಗಾರಿಗೆ ನೀಡಿದ್ದು, ಸರ್ಕಾರ ಇದುವರೆಗೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಹಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕರೀಂಖಾನ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ರೈತರು ಯಾವುದೇ ಷರತ್ತು ಇಲ್ಲದೆ, ಭೂಮಿ ನೀಡಿದ್ದಾರೆ, ಕಾಯ್ದೆ ಪ್ರಕಾರ ಭೂಸ್ವಾಧೀನ ವೆಚ್ಚದ ಶೇ.50 ಹಣವನ್ನು ಕಚೇರಿಯಲ್ಲಿ ಠೇವಣಿ ಇಡಬೇಕಾಗಿತ್ತು.ಉಳಿದಮೊತ್ತಮೂರು ತಿಂಗಳ ನಂತರ ಸರ್ಕಾರ ಠೇವಣಿ ಇಡ ಬೇಕಾಗಿತ್ತು. ಆದರೆ, 2 ವರ್ಷ ಕಳೆದರೂ ಭೂಸ್ವಾಧೀನ ಅಧಿಕಾರಿಗಳ ಕಚೇರಿಯಲ್ಲಿ ಠೇವಣಿಹಣಇಟ್ಟಿಲ್ಲ ಎಂದುದೂರಿದರು.
ಖಾತೆ ಮಾಡಲು ಆದೇಶಿಸಿ: ಈ ಯೋಜನೆ ಕಾಮಗಾರಿ ಬಹುತೇಕ ಮುಗಿಯುವಹಂತದಲ್ಲಿದ್ದರು. ಸರ್ಕಾರ ರೈತರ ಭೂಮಿಗೆ ಬೆಲೆ ನಿಗದಿ ಮಾಡಿಲ್ಲ, ಭೂಮಿಗೆ ಸಂಬಂಧಪಟ್ಟ ದಾಖಲಾತಿ ತಹಶೀಲ್ದಾರ್ ಸರಿಪಡಿಸುತ್ತಿಲ್ಲ, ಕೋರ್ಟ್ ಹಾಗೂ ಭೂಸ್ವಾಧೀನ ದಲ್ಲಿರುವ ಭೂಮಿಯನ್ನು ಯಾವುದೇ ಷರತ್ತು ವಿಧಿ ಸದೆ ಖಾತೆ ಮಾಡಲು ಆದೇಶ ಮಾಡ ಬೇಕು ಎಂದು ಮನವಿ ಮಾಡಿದರು.
ನೇರಖರೀದಿ ಮಾಡಿ:ಖುಷ್ಕಿ ಭೂಮಿಗೆ 50 ಲಕ್ಷ ರೂ., ಭಾಗಾಯ್ತು ಭೂಮಿಗೆ 60 ಲಕ್ಷ ರೂ. ಅನ್ನು ಸರ್ಕಾರ ಶಾಶ್ವತ ಪರಿಹಾರ ನೀಡಬೇಕು. ಇಲ್ಲವೇ, ಸಕಲೇಶಪುರ ವ್ಯಾಪ್ತಿಯಲ್ಲಿ ಮಾಡಿರುವಂತೆ ರೈತರಿಂದ ನೇರ ಖರೀದಿ ಮಾಡಬೇಕೆಂದು ತಾವುಗಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೀದಿಗಿಳಿದು ಹೋರಾಟ: ಸರ್ಕಾರ ಈಗಾಗಲೇಯೋಜನೆಗೆಬಿಡುಗಡೆ ಮಾಡಿರುವ ಹಣವು ಗುತ್ತಿಗೆದಾರರ ಕೈಗೆ ಸೇರುತ್ತದ್ದು, ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂಬುವುದು ತಮ್ಮೆಲ್ಲರ ಬೇಡಿಕೆ ಆಗಿದೆ. ಸರ್ಕಾರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದಿದ್ದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ರೈತರಾದ ಗಂಗಾಧರ್, ಶಶಿಧರ್, ರಘು, ಇನ್ನಿತರರು ಇದ್ದರು.