Advertisement

ವಸತಿ ನಿಲಯಕ್ಕೆ ಸೌಕರ್ಯ ಕಲ್ಪಿಸಿ

10:22 AM Sep 15, 2017 | |

ಜೇವರ್ಗಿ: ತಾಲೂಕಿನ ನೆಲೋಗಿ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು ವಸತಿ ನಿಲಯದ ಎದುರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು.

Advertisement

ವಸತಿ ನಿಲಯದಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಸರಕಾರ ಹಿಂದುಳಿದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂ. ವಿನಿಯೋಗಿಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎನ್ನುವುದಕ್ಕೆ ಈ ವಸತಿ ನಿಲಯವೇ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಅನೇಕ ದಿನಗಳಿಂದ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಮಕ್ಕಳೆ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾತ್ರಿ ಸಮಯದಲ್ಲಿ ವಸತಿ ನಿಲಯದಲ್ಲಿ ಕಾವಲುಗಾರ ಇಲ್ಲದೇ ಮಕ್ಕಳು ಭಯಪಡುವಂತೆ ಆಗಿದೆ. ಕೂಡಲೇ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ, ಆಟದ ಸಾಮಗ್ರಿ, ಊಟದ ಮೆನು ಚಾರ್ಟ್‌ ಅಳವಡಿಸಬೇಕು ಹಾಗೂ ಕಾವಲುಗಾರನನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.

Advertisement

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗಂಗಾಂಬಿಕಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜೈಕರವೇ ತಾಲೂಕು ಅಧ್ಯಕ್ಷ ಶರಬು ಕಲ್ಯಾಣಿ, ಮುಖಂಡರಾದ ಭಗವಂತ್ರಾಯ ಗುಜಗೊಂಡ, ಸೋಮಶೇಖರ ಹೂಗಾರ, ಗುರು ಪಾಟೀಲ, ವಿನೋಧ ಧಬಕಿ, ಶಿವುಕುಮಾರ ಬಿಲ್ಲಾಡ, ನಾಗರಾಜ ಕಂಕಿ, ರಾಜು ಮುದ್ದಾ, ಮಡಿವಾಳ ಜಗಲಗೊಂಡ, ಶರಣು ನರಸಕ್ಕಿ, ಶ್ರೀರಾಮ ಕ್ಷತ್ರಿ, ಕಲ್ಯಾಣಿ ಮಂಗಾ, ವಿನೋಧ ಹೂಗಾರ, ದೌಲು ಕ್ಷತ್ರಿ, ಗುರು ಹಳ್ಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next