ರಾಜ್ಯ ಅಧ್ಯಕ್ಷರು
ಕರ್ನಾಟಕದ ಸಮಗ್ರ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ದೂರದೃಷ್ಠಿಯ ಪ್ರಣಾಳಿಕೆ ಅಗತ್ಯವಿದೆ. ಸರಕಾರಗಳು ಶಿಕ್ಷಣ ಕ್ಷೇತ್ರವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಬಜೆಟ್‌ನಲ್ಲಿ ರಾಜ್ಯದ ಆದಾಯದ ಸೂಕ್ತ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಮುಖ್ಯವಾಗಿ ನಮ್ಮ ರಾಜ್ಯದ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಅಗತ್ಯ ಶಿಕ್ಷಕರ ಕೊರತೆಯಿಂದ ನಲುಗುತ್ತಿದೆ. ತರಗತಿಗೊಬ್ಬ ಶಿಕ್ಷಕರು ಶಾಲಾ ಶಿಕ್ಷಣದ ಅಗತ್ಯ. ಆದರೆ ನಮ್ಮ ಶಾಲೆಗಳಲ್ಲಿ ಹೀಗಿಲ್ಲ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದೆ. ಹೀಗಿರುವಾಗ ಅತ್ಯುತ್ತಮ ಶಿಕ್ಷಣ ಸಿಗಲಾರದು. ಇದಕ್ಕಾಗಿ ಕಾಲ ಕಾಲಕ್ಕೆ ಭೋಧಕರ ನೇಮಕಾತಿಯಾಗಬೇಕು. ಹೊಸ ವಿಶ್ವ ವಿದ್ಯಾಲಯಗಳನ್ನು ಘೋಷಣೆ ಮಾಡಿದರೆ ಸಾಲದು. ನೇಮಕಾತಿ ಹಾಗೂ ಮೂಲಭೂತ ಅಗತ್ಯಗಳನ್ನು ಪೂರೈಸಬೇಕು. ಮುಂದಿನ 5 ವರ್ಷಗಳಲ್ಲಿ ಗುಣಮಟ್ಟದಲ್ಲಿ ನಂಬರ್ 1 ಆಗುವ ಕಾರ್ಯಯೋಜನೆ ರೂಪಿಸಬೇಕು.
Advertisement
ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಹೊರೆಯಾಗಬಾರದು. ಕನಿಷ್ಠ 10 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ ಶಿಕ್ಷಣ ಸಾಲ ನೀಡಬೇಕು.
ಪ್ರಾಥಮಿಕ, ಪ್ರೌಢಶಾಲೆ ಹಂತದಲ್ಲಿ ಶಾಲೆ ತೊರೆಯುವ ಪ್ರಮಾಣ ಹೆಚ್ಚಾಗಿದ್ದು ಇದನ್ನು ತಪ್ಪಿಸಿ ಗರಿಷ್ಠ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಬರುವಂತೆ ಮಾಡಲು ಪ್ರೇರಣೆ ನೀಡುವ ಯೋಜನೆ ರೂಪಿಸಬೇಕು.
ಇತ್ತೀಚಿಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನು ತಡೆಗಟ್ಟಲು ಎಲ್ಲಾ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಪ್ತ ಸಮಾಲೋಚನೆ ವ್ಯವಸ್ಥೆ ಯನ್ನು ಜಾರಿ ತರಬೇಕು. ಇದಕ್ಕಾಗಿ ತರಬೇತಿ ಪಡೆದ ಆಪ್ತ ಸಮಾಲೋಚಕರ ನೇಮಕಾತಿ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗೊಳಿಸಬೇಕು. ಪೂರ್ವ ಪ್ರಾಥಮಿಕ ಶಾಲೆಯ ಹಂತದಿಂದಲೇ ಇದನ್ನು ಜಾರಿಗೊಳಿಸಬೇಕು.
Related Articles
Advertisement