Advertisement

ಡೀಸಿ ಕಚೇರಿ ಮುಂದೆ ಗುತ್ತಿಗೆ ನೌಕರರ ಪ್ರತಿಭಟನೆ

01:25 PM Jan 03, 2022 | Team Udayavani |

ಚನ್ನಪಟ್ಟಣ: ರಾಜ್ಯದ್ಯಂತ ವಿವಿಧ ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಪಂಗಳಲ್ಲಿ 30 ಸಾವಿರಕ್ಕೂ ಅಧಿಕ ಪೌರಕಾರ್ಮಿಕರ ಹುದ್ದೆಖಾಲಿಯಿದ್ದು, ಪೌರಕಾರ್ಮಿಕರ ನೇಮಕಾತಿ ಹಾಗೂ ಹೊರಗುತ್ತಿಗೆ ವಾಹನ ಚಾಲಕರು, ವಾಟರ್‌ವೆುನ್‌(ನೀರು ಗಂಟಿ)ಗಳ ನೇರವೇತನ ಜಾರಿಗೆ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆ ಜ.3ರ ಸೋಮ ವಾರದಂದು ಸಿಎಂ ಬೊಮ್ಮಾಯಿ ವಿರುದ್ಧ ಪ್ರತಿ ಭಟಿಸ ಲಾಗುವುದು ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ,ಪುರಸಭೆ ಮತ್ತು ಪಪಂ ಹೊರಗುತ್ತಿಗೆ ನೌಕರರಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಮೂರೂವರೆ ವರ್ಷ ಗಳಲ್ಲಿ ಒಬ್ಬನೆ ಒಬ್ಬ ಪೌರ ಕಾರ್ಮಿಕರ ನೇಮಕಾತಿ ಆಗಿಲ್ಲ. ನಗರ ಸ್ಥಳೀಯಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ವಾಹನ ಚಾಲಕರು, ವಾಟರ್‌ವೆುನ್‌ಡಾಟಾ ಆಪರೇಟರುಗಳನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಸಾಕಷ್ಟು ಹೋರಾಟ ನಡೆಸಿದರೂ ಸಹ ರಾಜ್ಯ ಸರ್ಕಾರನಿರ್ಲಕ್ಷ್ಯ ಧೋರಣೆ ತಾಳಿದೆ. ಕೊರೊನಾ ಹೆಸರಿನಲ್ಲಿರಾಜ್ಯ ಸರಕಾರ 95 ಸಾವಿರ ಕೋಟಿ ರೂ.ಸಾಲ ಎತ್ತಿದೆ. ಆದರೆ ಈ ಹಣ ಎಲ್ಲಿಗೆ ಹೋಗಿದೆ ಎಂಬುದೆತಿಳಿಯುತ್ತಿಲ್ಲ. ಸರ್ಕಾರ ಇದರ ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಎಚ್ಚರಿಕೆ: ರಾಜ್ಯ ಸರ್ಕಾರ ಕೂಡಲೆ ನಮ್ಮ ಆಗ್ರಹಗಳಿಗೆ ಸ್ಪಂದಿಸಬೇಕು. ತಪ್ಪಿದಲ್ಲಿ ಮುಂದಿನಸಾರ್ವತ್ರಿಕ ಚುನಾವಣೆಗೆ ಈ ವಿಷಯವನ್ನುಚುನಾವಣಾ ಅಜೆಂಡಾ ರೂಪಿಸಲಾಗುವುದು. ಇದೇಕಾರಣಕ್ಕಾಗಿ ಸೋಮವಾರ ರಾಮ ನಗರಕ್ಕೆ ಸಿಎಂಆಗಮಿಸುತ್ತಿದ್ದು, ಆ ಸಂದರ್ಭದಲ್ಲಿ ಅವರ ವಿರುದ್ಧ ಕಾರ್ಮಿಕ ರೆಲ್ಲರೂ ಪ್ರತಿಭಟಿಸಿ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ನೌಕರರ ಬಗ್ಗೆ ಕಾಳಜಿವಹಿಸಿ: ಇದಲ್ಲದೆ ಡಿ.29ರಂದು ರಾಮನಗರದಲ್ಲಿ ನಡೆದ ಪೌರಕಾರ್ಮಿಕರ ಹಾಗೂ ಹೊರಗುತ್ತಿಗೆ ನೌಕರರ ಸಮಾವೇಶ ಹಾಗೂ ಕನ್ನಡರಾಜ್ಯೋತ್ಸವಕ್ಕೆ ಎಚ್‌.ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌, ಅನಿತಾ ಕುಮಾರ ಸ್ವಾಮಿ, ಎ.ಮಂಜುನಾಥ, ಸಿ.ಪಿ.ಯೋಗೇಶ್ವರ್‌ ಸೇರಿದಂತೆ ಎಲ್ಲ

ಜನಪ್ರತಿನಿ ಗಳಿಗೂ ಖುದ್ದು ಆಹ್ವಾನ ಪತ್ರಿಕೆ ತಲುಪಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಜಿಲ್ಲೆಯ ಎಲ್ಲ ಶಾಸಕರುಸಾಮೂಹಿಕ ಗೈರಾಗಿದ್ದಾರೆ. ಪೌರಕಾರ್ಮಿಕರುಹಾಗೂ ಹೊರಗುತ್ತಿಗೆ ನೌಕರರ ಬಗೆಗಿನ ಈ ನಿರ್ಲಕ್ಷ್ಯವನ್ನು ನಾವು ಖಂಡಿಸುತ್ತೇವೆ. ಜಿಲ್ಲೆಯ ಜನಪ್ರತಿನಿಧಿಗಳು ದುಡಿಯುವ ವರ್ಗದ ನೌಕರರ ಬಗ್ಗೆ ಕಾಳಜಿವಹಿಸಲಿ ಎಂದು ಆಗ್ರಹಿಸುತ್ತೇವೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ

ಛಲಪತಿ, ಚನ್ನಪಟ್ಟಣ ತಾಲೂಕು ಮುಖಂಡರಾದ ಗಣೇಶ್‌, ಮಹೇಂದ್ರ ಮತ್ತು ರಾಜ್ಯ ಕಾರ್ಯ ದರ್ಶಿ ಶ್ರೀನಿವಾಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next