Advertisement

ಅತಿಥಿ ಉಪನ್ಯಾಸಕರ ಕಾಯಂಗೆ ಪ್ರತಿಭಟನೆ

05:17 PM Jan 01, 2022 | Team Udayavani |

ಸಿಂಧನೂರು: ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸರಕಾರಿ ಪ್ರಥಮ ದಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಒಕ್ಕೂಟದ ಮುಖಂಡ ಚಂದ್ರಶೇಖರ ಗೊರಬಾಳ ಮಾತನಾಡಿ, ಕಳೆದ ಎರಡು ದಶಕಗಳಿಂದಲೂ ಅರೆಕಾಲಿಕರಾಗಿ ಕೆಲಸ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಸರಕಾರ ರೂಪಿಸಬೇಕು. ರಾಜ್ಯದ 430 ಕಾಲೇಜುಗಳಲ್ಲಿ 14,500 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಬೇಡಿಕೆ ಈಡೇರಿಸಲು ಒತ್ತಾಯಿಸಿ ಡಿ.10ರಿಂದಲೇ ತರಗತಿ ಬಹಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಸ್ಪಂದಿಸಿಲ್ಲ. ಉನ್ನತ ಶಿಕ್ಷಣ ಸಚಿವರು, ಇಲಾಖೆ ಆಯುಕ್ತರು ಗಮನ ಹರಿಸಿಲ್ಲ. ಇದರಿಂದಾಗಿ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತಾಗಿದೆ. ಕಳೆದ ಎರಡು ವರ್ಷಗಳಿಂದ ಲಾಕ್‌ಡೌನ್‌ ನಿಂದ ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಿದ್ದಾರೆ. ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು ಮುಂದಾಗಬೇಕು. ಕೋವಿಡ್‌ ಸಂದರ್ಭದಲ್ಲಿ ಉಪನ್ಯಾಸಕರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಮೃತ ಉಪನ್ಯಾಸಕರಿಗೆ 20 ಲಕ್ಷ ರೂ.ಪರಿಹಾರ ಮೊತ್ತ ಘೋಷಿಸಬೇಕು. ಉಪನ್ಯಾಸಕರನ್ನು ಕಾಯಂಗೊಳಿಸಿ, ಸೇವಾ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಸದಸ್ಯರಾದ ರಾಮಣ್ಣ ಹಿರೇಬೇರ್ಗಿ, ಡಾ| ಮದಗಪ್ಪ, ಶಂಕರ ಗುರಿಕಾರ್‌, ಡಾ| ಅರುಣ್‌ ಕುಮಾರ್‌ ಬೇರ್ಗಿ, ವಿಶ್ವನಾಥ ಗೋನಾಳ, ಡಾ| ಬಸವರಾಜ ನಾಯಕ್‌, ಪರಶುರಾಮ ಮಲ್ಲಾಪುರ, ಗುಲಾಬ್‌ ಸಿಂಗ್‌, ಯರಿಯಪ್ಪ ಬೆಳಗುರ್ಕಿ, ಚನ್ನಬಸಮ್ಮ.ಪಿ, ಶೋಭಾ, ಸುಜಾತಾ, ಸುನಿತಾ, ಶಿಲ್ಪಾ, ಒಕ್ಕೂಟದ ಗೌರವಾಧ್ಯಕ್ಷ ಡಾ| ಎಂ.ಎಸ್‌. ಹಂಚಿನಾಳ, ವಿ.ಸಿ. ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next