Advertisement

ಶೋಷಣೆ-ದೌರ್ಜನ್ಯ ಖಂಡಿಸಿ ಅಹಿಂದ ಪ್ರತಿಭಟನೆ

04:48 PM Mar 15, 2022 | Team Udayavani |

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ಮತ್ತು ಯಾದಗಿರಿ ಶಾಸಕರ ಸಂಬಂಧಿಗಳು ದೌರ್ಜನ್ಯ, ಶೋಷಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಹಿಂದ ಹೋರಾಟಗಾರರ ಒಕ್ಕೂಟದಿಂದ ಸುಭಾಷ್‌ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಇದೇ ವೇಳೆ ಮಾತನಾಡಿದ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್‌, ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳಾದರೂ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಶೋಷಣೆ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣ ಜೀವಂತವಾಗಿರುವುದು ಖಂಡನೀಯ. ಸರ್ಕಾರಗಳು ಈ ಜನಾಂಗದ ಹಿತಾಸಕ್ತಿ ಕಾಪಾಡುವಲ್ಲಿ ನಿಷ್ಕಾಳಜಿ ವಹಿಸಿರುವುದರಿಂದಲೇ ಶಾಸಕರಿಂದ ಮತ್ತು ಅವರ ಸಂಬಂಧಿಗಳಿಂದ ಇಂತಹ ಕೃತ್ಯಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.

ಯಾದಗಿರಿ ಮತ್ತು ಗುರುಮಿಠಕಲ್‌ ವ್ಯಾಪ್ತಿಯ ಪೊಲೀಸ್‌ ಠಾಣೆ ಅಧಿಕಾರಿಗಳು ಸುಳ್ಳು ಕ್ರಿಮಿನಲ್‌ ಕೇಸ್‌ ದಾಖಲು ಮಾಡಿ ಮಾನಸಿಕವಾಗಿ ಹಿಂಸೆ ಕೊಡುತ್ತಾ ಬಡವರನ್ನು ಶೋಷಣೆ ಮಾಡಿ ಹಣ ಕೀಳುತ್ತಿದ್ದಾರೆ. ಬಡವರ ಗೋಳು ಕೇಳುವವರಿಲ್ಲದಂತಾಗಿದೆ. ಮೇಲ್ವರ್ಗದ ಪಟ್ಟಭದ್ರ ರಾಜಕೀಯ ಮುಖಂಡರ ಮಾತು ಕೇಳಿ ಜಾತಿ, ಜಾತಿಗಳ ಮಧ್ಯೆ ಜಗಳ ಹಚ್ಚುವವರ ರಕ್ಷಣೆಗೆ ಶಾಸಕರು ನಿಲ್ಲುತಾರೆ. ಶಾಸಕರ ಹಾಗೂ ಅವರ ಸಂಬಂಧಿಕರ ದರ್ಪ ದೌರ್ಜನ್ಯದಿಂದ ಕ್ಷೇತ್ರದ ಜನತೆ ನಲುಗಿ ಹೋಗಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಾಯಿಬಣ್ಣ ಬೋರಬಂಡಾ, ಮರೆಪ್ಪ ನಾಯಕ ಮಗದಂಪುರ, ಡಾ| ಭೀಮಣ್ಣ ಮೇಟಿ, ಶರಣಪ್ಪ ಮಾನೇಗಾರ, ದೇವರಾಜ ನಾಯಕ, ವಿಜಯಕುಮಾರ ಶಿರಗೋಳ, ಮಹೇಶ ಅನಪೂರ, ನಾಗರತ್ನ ಅನಪೂರ, ಟಿ.ಎನ್‌. ಭೀಮುನಾಯಕ, ಮಲ್ಲು ಮಾಳಿಕೇರಿ, ಸಾಹೇಬಗೌಡ ನಾಯಕ್‌, ಸಿದ್ದಪ್ಪ ಲಿಂಗೇರಿ, ಮಲ್ಲಿಕಾರ್ಜುನ ಕ್ರಾಂತಿ, ಭಾಷುಮಿಯಾ ವಡಗೇರಾ, ಮರೆಪ್ಪ ಚಟ್ಟೇರಕರ್‌, ಹನುಮಂತ ಖಾನಳ್ಳಿ, ಹನುಮಂತ ಅಚ್ಚೊಲಾ, ವಿಜಯಕುಮಾರ್‌ ಶಿರಗೋಳ, ರಾಮುನಾಯಕ ಸುರಪೂರ, ಶರಣಪ್ಪ ಜಾಕನಳ್ಳಿ, ಬಸವರಾಜ ಬಾಗ್ಲಿ, ತೇಜುರಾಜ ರಾಠೊಡ, ವಿಶ್ವನಾಥ ನಾಯಕ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next