Advertisement

ತಟ್ಟೆ ಲೋಟ ಹಿಡಿದು ಪ್ರತಿಭಟನಾ ಮೆರವಣಿಗೆ

03:42 PM Apr 13, 2021 | Team Udayavani |

ಚನ್ನಪಟ್ಟಣ: 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮತ್ತಷ್ಟುತೀವ್ರಗೊಂಡಿದೆ. ಚನ್ನಪಟ್ಟಣ ಉಪವಿಭಾಗದ ನೌಕರರು ಮತ್ತು ಅವರ ಕುಟುಂಬದವರು ಸೋಮವಾರ ತಾಲೂಕು ಕಚೇರಿ ಮುಂಭಾಗ ತಟ್ಟೆ, ಲೋಟ ಬಡಿದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿನ ಸಾರಿಗೆ ಸಂಸ್ಥೆ ಘಟಕದಿಂದ ಸಾತನೂರು ರಸ್ತೆ, ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿ ಮುಂಭಾಗ ಸಮಾವೇಶ ಗೊಂಡು ಪ್ರತಿಭಟಿಸಿದರು.

ನೈತಿಕ ಬೆಂಬಲ: ಒಂದೆಡೆ ತಮ್ಮ ನ್ಯಾಯಯುತ ಬೇಡಿಕೆಈಡೇರಿಕೆಗಾಗಿ ನೌಕರರು ಶಾಂತಿಯುತವಾಗಿ ಮುಷ್ಕರನಡೆಸುತ್ತಿದ್ದಾರೆ, ನಾವು ಅವರಿಗೆ ನೈತಿಕ ಬೆಂಬಲ ನೀಡಿ,ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಾರಿಗೆ ಸಂಸ್ಥೆ ನೌಕರರ ಕುಟುಂಬದವರು ತಿಳಿಸಿದರು.

ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ, ಕೆಎಸ್ಸಾರ್ಟಿಸಿ “ಸಿ’ ವರ್ಗದನೌಕರರ ಮಾರ್ಚ್‌ ತಿಂಗಳ ವೇತನ ಬಿಡುಗಡೆ ಮಾಡಿ ಸಾರಿಗೆ ನೌಕರರ ಲಕ್ಷಾಂತರ ಕುಟುಂಬ ನೆಮ್ಮದಿ ಯಾಗಿ ಯುಗಾದಿ ಹಬ್ಬ ಆಚರಣೆ ಮಾಡಲು ಅನುವು ಮಾಡಿಕೊಡಬೇಕು. ಅಲ್ಲದೇ, ವರ್ಗಾವಣೆ, ವಜಾ ಆದೇಶ  ರದ್ದುಗೊಳಿಸಬೇಕೆಂದು ತಹಶೀಲ್ದಾರ್‌ ನಾಗೇಶ್‌ ಅವರಮೂಲಕ ಮನವಿ ಸಲ್ಲಿಸಿದರು. ಚನ್ನಪಟ್ಟಣ ಸಾರಿಗೆ ಸಂಸ್ಥೆ ಘಟಕದ ನೌಕರರ ಸಂಘದ ಮುಖಂಡರು, ಕುಟುಂಬದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next